ರಾಮನಗರ:ಚನ್ನಪಟ್ಟಣ ಕ್ಷೇತ್ರದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ಬಾಮೈದುನ ನಾಪತ್ತೆಯಾಗಿದ್ದಾರೆ. ಮಹದೇವಯ್ಯ (62) ನಾಪತ್ತೆಯಾಗಿದ್ದಾರೆ. ಅವರು ಕಿಡ್ನಾಪ್ ಆಗಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದ ಮಹದೇವಯ್ಯ ಅವರು ಕಾಣುತ್ತಿಲ್ಲ.
ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಬಾಮೈದುನ ನಾಪತ್ತೆ - yogeshwars family member missing case
ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ಬಾಮೈದುನ ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ.

ಸಿ ಪಿ ಯೋಗೇಶ್ವರ್ ಬಾಮೈದುನ ನಾಪತ್ತೆ
Published : Dec 2, 2023, 8:49 PM IST
ಮಹದೇವಯ್ಯ ಅವರ ಮನೆಯ ಕೋಣೆ, ಬೀರು ಬಾಗಿಲುಗಳು ತೆರೆದ ಸ್ಥಿತಿಯಲ್ಲಿದೆ. ಮಹದೇಶ್ವರ ಬೆಟ್ಟದಲ್ಲಿ ಮಹದೇವಯ್ಯ ಅವರ ಮೊಬೈಲ್ ಲೋಕೇಶನ್ ಪತ್ತೆಯಾಗಿದೆ. ಮಹದೇವಯ್ಯ ಕಾಣೆಯಾಗಿರುವ ಬಗ್ಗೆ ಚನ್ನಪಟ್ಟಣ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿ ಬೆಟ್ಟಕ್ಕೆ ತೆರಳಿದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಭಾರತ - ಆಸೀಸ್ ಟಿ20 ಪಂದ್ಯ: ಮದ್ಯದ ನಶೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಇಬ್ಬರ ಬಂಧನ