ಕರ್ನಾಟಕ

karnataka

ETV Bharat / state

ಡಿಕೆಶಿ ಗುಂಡಾಗಿರಿ, ಉಢಾಪೆಗೆ ಸರ್ಕಾರ ಎಂದೂ ಜಗ್ಗಲ್ಲ: ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಿಪಿವೈ ಆಕ್ರೋಶ

ಡಿಕೆಶಿ ಗುಂಡಾಗಿರಿಗೆ, ಉಢಾಪೆಗೆ ಸರ್ಕಾರ ಎಂದೂ ಕೂಡ ಜಗ್ಗಲ್ಲ. ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಿಪಿವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CP Yogeshwar spark on Congress padayatra, CP Yogeshwar spark on Congress padayatra in Ramanagar, Ramanagar news, former minister CP Yogeshwar news, ಕಾಂಗ್ರೆಸ್ ಪಾದಯಾತ್ರೆ ಮೇಲೆ ಕಿಡಿ ಕಾರಿದ ಸಿಪಿ ಯೋಗೇಶ್ವರ್​, ರಾಮನಗರದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮೇಲೆ ಕಿಡಿ ಕಾರಿದ ಸಿಪಿ ಯೋಗೇಶ್ವರ್, ರಾಮನಗರ ಸುದ್ದಿ, ಮಾಜಿ ಸವಿಚ ಸಿಪಿ ಯೋಗೇಶ್ವರ ಸುದ್ದಿ,
ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಿಪಿವೈ ಆಕ್ರೋಶ

By

Published : Jan 13, 2022, 10:25 AM IST

Updated : Jan 13, 2022, 12:37 PM IST

ರಾಮನಗರ :ಇದೊಂದು‌ ಡೋಂಗಿ ಪಾದಯಾತ್ರೆ. ಡಿಕೆಶಿ ಗುಂಡಾಗಿರಿಗೆ, ಉಢಾಪೆಗೆ ಸರ್ಕಾರ ಎಂದೂ ಕೂಡ ಜಗ್ಗಲ್ಲ. ಡಿಕೆಶಿ ಒಬ್ಬ ಭ್ರಷ್ಟ ಲೂಟಿ ಕೋರ. ಇದರಿಂದಲೇ ಒಂದು ವರ್ಷ ಕ್ಯಾಬಿನೆಟ್​​​ನಲ್ಲಿ ಇವರನ್ನು ತೆಗೆದುಕೊಂಡಿರಲಿಲ್ಲ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್​ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಸಿಪಿವೈ ಆಕ್ರೋಶ

ರಾಮನಗರದ ಖಾಸಗಿ ಹೋಟೆಲ್​ನಲ್ಲಿ‌ ಸುದ್ದಿಗೋಷ್ಠಿ ‌ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಳೆದ 4 ದಿನಗಳಿಂದ ಡಿಕೆಶಿ‌ ಪಟಾಲಂ ಅವರಿಂದ ಮಾತ್ರ ಪಾದಯಾತ್ರೆ ನಡೆಯುತ್ತಿದೆ.

ದುಡ್ಡುಕೊಟ್ಟು ಜನರನ್ನ ಕರೆತಂದು ಪಾದಯಾತ್ರೆಗೆ ಕರೆತರಲಾಗುತ್ತಿದೆ. ಇವರ ದಬ್ಬಾಳಿಗೆ ಸರ್ಕಾರ ಎಂದೂ ಕೂಡ ಜಗ್ಗುವುದಿಲ್ಲ. ದಂಡಂ ದಶಗುಣಂ ಮಾಡಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೂಡಲೆ ಡಿಕೆಶಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಓದಿ:ಗ್ಯಾಸೋಲಿನ್ ಪೈಪ್‌ಲೈನ್ ಸ್ಫೋಟ: ಮೂರು ದಿನ ಕಳೆದರೂ ಹೊತ್ತಿ ಉರಿಯುತ್ತಿರುವ ಬೆಂಕಿ!

ಮೈಸೂರು ಭಾಗದಲ್ಲಿ ಪ್ರಭಾವ ಬೀಳುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಇದೊಂದು‌ ಡೋಂಗಿ ಪಾದಯಾತ್ರೆ ನಡೆಸಲಾಗುತ್ತಿದೆ. ಸರ್ಕಾರ ಎಂದಿಗೂ‌ ಕೂಡ ಡಿಕೆಶಿ ಗುಂಡಾಗಿರಿಗೆ, ಉಢಾಪೆಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಡಿಕೆಶಿ ಒಬ್ಬ ಭ್ರಷ್ಟ ಲೂಟಿ ಕೋರ. ಇದರಿಂದಲೇ ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ವರ್ಷ ಕ್ಯಾಬಿನೆಟ್ ತೆಗೆದುಕೊಂಡಿರಲಿಲ್ಲ. ಆದರೆ ಈಗ ಸಿದ್ದರಾಮಯ್ಯ ವೀಕ್ ಆಗಿದ್ದಾರೆ ಅನಿಸುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದೆ. ಡಿಕೆ ಹಳೆ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಈ ಪಾದಯಾತ್ರೆ ನಡೆಲಾಗುತ್ತಿದೆ. ಈ ಕೂಡಲೇ ಡಿಕೆಶಿ ಸೇರಿದಂತೆ ‌ಅವರ ಪಟಾಲಂ ರನ್ನ ಕೂಡಲೇ ಬಂಧಿಸುವಂತೆ ಸಿಪಿ ಯೋಗೇಶ್ ಒತ್ತಾಯಿಸಿದರು.

Last Updated : Jan 13, 2022, 12:37 PM IST

ABOUT THE AUTHOR

...view details