ಕರ್ನಾಟಕ

karnataka

ETV Bharat / state

ನಾಳೆ ಜೆಡಿಎಸ್ ಮಿಷನ್ -123 ಕಾರ್ಯಾಗಾರದಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ: ಹೆಚ್​ಡಿಕೆ - ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ದೇವೇಗೌಡರ ನೇತೃತ್ವದಲ್ಲೇ ಜೆಡಿಎಸ್ ಕಾರ್ಯಾಗಾರ ನಡೆಯಲಿದೆ. ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸಹ ಕಾರ್ಯಗಾರದಲ್ಲಿ ಭಾಗಿಯಾಲಿದ್ದಾರೆಂದು ಹೆಚ್ಡಿಕೆ ತಿಳಿಸಿದರು.

ರಾಮನಗರದಲ್ಲಿ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
ರಾಮನಗರದಲ್ಲಿ ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

By

Published : Sep 26, 2021, 5:07 PM IST

ರಾಮನಗರ: ನಾಳೆಯಿಂದ ಬಿಡದಿಯ ಹೆಚ್.ಡಿ.ಕೆ ತೋಟದ ಮನೆಯಲ್ಲಿ 4 ದಿನಗಳ ಕಾಲ ಜೆಡಿಎಸ್ ಮಿಷನ್ -123 ಕಾರ್ಯಾಗಾರಕ್ಕೆ ಚಾಲನೆ ಸಿಗಲಿದೆ ಎಂದು ಮಾಜಿ‌ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಿಡದಿ ತೋಟದ ಮನೆಯಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ 123 ಜನ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. 123 ಜನರಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಲಿದ್ದು, ಮುಂದಿನ ಜನವರಿವರೆಗೆ ಆ ಅಭ್ಯರ್ಥಿಗಳ ಕಾರ್ಯವನ್ನು ವೀಕ್ಷಣೆ ಮಾಡಲಾಗುತ್ತೆ. ನಂತರ ಅವರ ಕಾರ್ಯ, ಸಂಘಟನೆ ನೋಡಿ ಎಲ್ಲೋ - ರೆಡ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ತೋಟದ ಮನೆಯಲ್ಲಿ ತಯಾರಿ ಕಾರ್ಯ ಜೋರಾಗಿ ನಡೆಯುತ್ತಿದ್ದು, ರಾಜ್ಯದ ಎಲ್ಲಾ ಕ್ಷೇತ್ರದ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಭಾಗಿಯಾಗಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಪಾಲ್ಗೊಳ್ಳಲಿದ್ದಾರೆ. ದೇವೇಗೌಡರ ನೇತೃತ್ವದಲ್ಲೇ ಜೆಡಿಎಸ್ ಕಾರ್ಯಗಾರ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸಹ ಕಾರ್ಯಗಾರದಲ್ಲಿ ಭಾಗಿಯಾಲಿದ್ದಾರೆ ಎಂದರು.

ಜಾತಿ ಜನಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ‌ ಮಾಜಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸುಳ್ಳು ಹೇಳಲು ಇತಿಮಿತಿ ಇರಬೇಕು. ಜಾತಿ ಜನಗಣತಿ ಬಗ್ಗೆ ಸದನದಲ್ಲಿ ಮಾತನಾಡಬಹುದಿತ್ತು. ಆದರೆ ಅವರು ಹೊರಗಡೆ ಮಾತನಾಡುತ್ತಿದ್ದಾರೆ. ಹತ್ತುದಿನಗಳ ಕಾಲ ಸದನ ನಡೆದಿದೆ. ಸದನವನ್ನ ಉಪಯೋಗ ಮಾಡಿಕೊಂಡ್ರೋ, ದುರುಪಯೋಗ ಮಾಡಿಕೊಂಡ್ರೋ ಗೊತ್ತಿಲ್ಲ. ಇದರಿಂದ ಏನು ಸಾಧನೆ ಮಾಡಿದ್ದಾರೆ ಎಂದರು.

ಸದನದಲ್ಲಿ ನಿಯಮ 69 ರಲ್ಲಿ ಚರ್ಚೆಗೆ ತರಬೇಕಿತ್ತು. ಸಂಪೂರ್ಣವಾಗಿ ಚರ್ಚೆ ಮಾಡಬಹುದಿತ್ತು. ಇದರಿಂದ ರಾಜ್ಯದ ಜನತೆ ಮುಂದೆ ಸತ್ಯ ತೆರೆದಿಡಬಹುದಿತ್ತು. ಬೀದಿಯಲ್ಲಿ ಮಾತನಾಡುವುದು ಅವರ ಇಬ್ಬಗೆಯ ನೀತಿ ತೋರುತ್ತೆ. ಅವರಿಗೆ ಇದು ಅವಶ್ಯಕತೆ‌ ಇರಲಿಲ್ಲ. ಇನ್ನು ಜಾತಿ ಸಮೀಕ್ಷೆ ಅವರಿಗೆ ಪ್ರಚಾರಕ್ಕೆ ಬೇಕಾಗಿದೆ. ಅದಕ್ಕಾಗಿ ಪ್ರತಿ ನಿತ್ಯ ನನ್ನ ಹೆಸರು ಕೆದಕುತ್ತಿದ್ದಾರೆ. ನನ್ನ ಹೆಸರು ಕೆದಕಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಅನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾಳೆ ನಡೆಯಲಿರುವ ಭಾರತ ಬಂದ್‌ಗೆ ಜೆಡಿಎಸ್ ವತಿಯಿಂದ ಬೆಂಬಲವಿದೆ. ರೈತರ ಹಿತದೃಷ್ಟಿಯಿಂದ ಯಾವುದೇ ಹೋರಾಟ ಮಾಡಿದ್ರೂ ನನ್ನ ಬೆಂಬಲವಿದೆ ಎಂದು ಹೇಳಿದರು.

ABOUT THE AUTHOR

...view details