ರಾಮನಗರ: ದೇಶದಲ್ಲಿ ಇರೋದು ಬಿಜೆಪಿ ಸರ್ಕಾರ ಅಲ್ಲ. ಅದು ಆರ್ಎಸ್ಎಸ್ ಸರ್ಕಾರ. ಬಿಜೆಪಿ ಬದಲು ಅಧಿಕಾರ ಚಲಾಯಿಸುತ್ತಿರೋದು ಆರ್ಎಸ್ಎಸ್ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ರಾಮನಗರ ಜಿಲ್ಲೆ ಬಿಡದಿಯಲ್ಲಿ ನಡೆದ ಕೊನೆ ದಿನದ ಜೆಡಿಎಸ್ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದ ಸಿವಿಲ್ ಸರ್ವೆಂಟ್ಗಳು ಎಂದರೆ ಅದು ಆರ್ಎಸ್ಎಸ್ನವರು. 4 ಸಾವಿರ ಅಧಿಕಾರಿಗಳು ಆರ್ಎಸ್ಎಸ್ ಕಾರ್ಯಕರ್ತರಾಗಿದ್ದಾರೆ. ಅವರಿಗೆ ಎಕ್ಸಾಂ ಬರೆಯಲು ಟ್ರೈನಿಂಗ್ ಕೊಡ್ತಾರೆ. ಒಂದೇ ವರ್ಷ 676 ಜನ ಆಯ್ಕೆಯಾಗ್ತಾರೆ ಎಂದರು.
ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಬಗ್ಗೆ ಖಂಡನೆ - ರೈತರ ಬಗ್ಗೆ ಗೌರವ ಇದ್ದರೆ ಕಾರು ಹತ್ತಿಸಿದವನನ್ನು ಅರೆಸ್ಟ್ ಮಾಡಬೇಕಿತ್ತು. ಇದುವರೆಗೂ ಯಾಕೆ ರಕ್ಷಣೆ ಕೊಟ್ಟಿದ್ದೀರಾ?. ಅದೇ ಸಾಮಾನ್ಯ ಜನರು ಈ ಕೆಲಸ ಮಾಡಿದ್ದರೆ ತಕ್ಷಣ ಅರೆಸ್ಟ್ ಮಾಡುತ್ತಿದ್ದರು ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಆದಿತ್ಯನಾಥ್ ಬಂದ ಮೇಲೆ ಉತ್ತರ ಪ್ರದೇಶ ಶಾಂತಿಯುತ ಆಗಿದೆ ಅಂತಾರೆ. ಇದೇನಾ ಶಾಂತಿಯುತ ಉತ್ತರ ಪ್ರದೇಶ. ಅಧಿಕಾರ ಬರಲು ಅಮಾಯಕರನ್ನು ಬಲಿ ಪಡೆಯುವುದು, ರಕ್ತದೋಕುಳಿ ಮಾಡ್ತಾ ಇದ್ದೀರಾ.? ಇದುವರೆಗೂ ಒಬ್ಬ ರೈತನನ್ನು ಕರೆದು ಚರ್ಚೆ ಮಾಡಿಲ್ಲ ಮೋದಿಯವರು. ಕರೆದು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತೆ. ಆದರೆ, ಆ ಕೆಲಸ ಯಾಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ದೇಶದಲ್ಲಿ ಕಾಂಗ್ರೆಸ್ ಸರಿಯಿಲ್ಲ -ದೇಶದಲ್ಲಿ ಕಾಂಗ್ರೆಸ್ ಸರಿಯಾಗಿದಿದ್ದರೆ ಅವರಿಗೆ ಈ ಗತಿ ಬರುತ್ತಿರಲಿಲ್ಲ. ಅವರ ಸ್ವೇಚ್ಛಾ ವರ್ತನೆಯಿಂದಲೇ ಇಂತಹ ವಾತಾವರಣ ನಿರ್ಮಾಣ ಆಗಿರೋದು. ಕಾಂಗ್ರೆಸ್ಗೆ ಸುದೀರ್ಘ ಅಧಿಕಾರ ಇದ್ದಾಗ ಯಾವ ರೀತಿ ನಡೆದುಕೊಂಡರು ಗೊತ್ತಿದೆ ಎಂದರು.
ಮೂರು ಸಾವಿರ ರೈತರು ಸಾಯುವವರೆಗೂ ಏನೂ ಗೊತ್ತಿಲ್ಲದಂತೆ ಇದ್ದರು ಆಗಿನ ಸಿಎಂ. ರಾಜಕೀಯಕ್ಕೆ ಹಾಗೂ ಅಧಿಕಾರ ಹಿಡಿಯಲು ಹೀಗೆ ಮಾಡ್ತಾ ಇದ್ದಾರೆ. ತರಾತುರಿಯಲ್ಲಿ ಇವರು ಪಂಜಿನ ಮೆರವಣಿಗೆ ಮಾಡಿದ್ರು. ಅದರಿಂದ ಏನು ಪ್ರಯೋಜನ ಇದೆ ಹೇಳಿ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಓದಿ:ತಾಲಿಬಾನಿಗಳಿಗೆ RSS ಹೋಲಿಸಿದ ಸಿದ್ದರಾಮಯ್ಯಗೆ ತಲೆಕೆಟ್ಟಿದೆ: ಎನ್. ರವಿಕುಮಾರ್