ರಾಮನಗರ: ಬಿಜೆಪಿ ಸರ್ಕಾರ ರೈತರಿಗೆ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿದೆಯೇ ಹೊರತು ಹಣ ಕೊಡುತ್ತಿಲ್ಲ. ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಹೆಚ್ಚು ಪ್ರೋತ್ಸಾಹ ಧನ ನೀಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ಡಿಕೆ ಹೇಳಿದರು.
ಗೋವಿಂದಳ್ಳಿ ಗ್ರಾಮದ ಮಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಹೆಚ್ಡಿಕೆ ಭೇಟಿ ಚನ್ನಪಟ್ಟಣ ತಾಲೂಕಿನ ಗೋವಿಂದಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಹಾನಿಗೆ ತುತ್ತಾಗಿ 150 ಎಕರೆ ಬಾಳೆ ಜೊತಗೆ ತೆಂಗು ನಾಶವಾಗಿದ್ದ ಸ್ಥಳ ಪರಿಶೀಲನೆ ನಡೆಸಿ, ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ಹತ್ತು ಸಾವಿರ ವೈಯುಕ್ತಿಕ ಪರಿಹಾರ ಘೋಷಿಸಿದರು. ಅಲ್ಲದೆ ಕೆಲವು ರೈತರ ಮನೆಗಳು ಪ್ರಕೃತಿ ವಿಕೋಪ ಅನಾಹುತದಿಂದ ಜಖಂ ಗೊಂಡಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅವರೆಲ್ಲರಿಗೂ ನಾನು ವಯಕ್ತಿಕವಾಗಿ ಸಹಾಯ ಮಾಡಿವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಇನ್ನು ರೈತರು ಸಂಕಷ್ಟದಲ್ಲೇ ಬೇಸಾಯ ಮಾಡುತ್ತಿದ್ದಾರೆ. ವಿಶೇಷವಾಗಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ಕುಮಾರ್ ಎಂಬಾತ ಡ್ರೈವರ್ ವೃತ್ತಿ ಸಾಧ್ಯವಾಗದ ಹಿನ್ನೆಲೆ ಲೀಸ್ಗೆ ಭೂಮಿ ಪಡೆದು ಬಾಳೆ ಬೆಳೆ ಬೆಳೆಯಲು ಮುಂದಾಗಿದ್ದರು. ಇದೀಗ ಅದೆಲ್ಲವೂ ನಾಶವಾಗಿದೆ. ಒಂದು ಎಕರೆ ಬಾಳೆ ಬೆಳೆಯಲು 80 ಸಾವಿರದಿಂದ ಲಕ್ಷ ಖರ್ಚಾಗುತ್ತದೆ. ಪ್ರಕೃತಿ ವಿಕೋಪಕ್ಕೆ ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ, ಹಾಗಾಗಿ ಸರ್ಕಾರ ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿದ್ದೇನೆ ಎಂದರು.
ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ, ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಪಡಿಸಿದ್ದೇನೆ. ಇದು ಕೇವಲ ಘೋಷಣೆಯ ಸರ್ಕಾರ ಅಷ್ಟೇ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸಂಸದ ಡಿ.ಕೆ. ಸುರೇಶ್ ಮಾಜಿ ಸಿಎಂ ಗೆ ಸಾಥ್ ನೀಡಿದರು.