ರಾಮನಗರ:ಆಹಾರ ಅರಸಿ ಬಂದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಮಾಗಡಿ ತಾಲೂಕಿನ ಸೀಗೆಕುಪ್ಪೆ ಕಾಲೋನಿಯಲ್ಲಿ ನಡೆದಿದೆ.
ಮೂರ್ನಾಲ್ಕು ತಿಂಗಳಿನಿಂದ ಜನರ ನಿದ್ದೆಗೆಡಿಸಿದ ಚಿರತೆ ಬೋನಿಗೆ - ರಾಮನಗರ ಲೆಟೆಸ್ಟ್ ನ್ಯೂಸ್
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೀಗೆಕುಪ್ಪೆ ಕಾಲೋನಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಜನರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
Forest officer captures Leopard
ಕಳೆದ ಮೂರ್ನಾಲ್ಕು ತಿಂಗಳಿನಿಂದ ಆಗಾಗ ಕಾಣಿಸಿಕೊಂಡು ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಕಾಟಕ್ಕೆ ಸ್ಥಳೀಯರು ಹೈರಾಣಾಗಿದ್ದರು. ಮಾಗಡಿ ತಾಲೂಕಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಮೇಕೆ, ಕುರಿ ತಿಂದಿದ್ದ ಘಟನೆಗಳು ಕೂಡ ನಡೆದಿವೆ. ಇದರಿಂದ ಬೇಸತ್ತ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ದೂರುಗಳನ್ನು ನೀಡಿದ್ದರು.
ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಬೋನಿಟ್ಟು ಚಿರತೆ ಸೆರೆಗೆ ಮುಂದಾಗಿತ್ತು. ಇದೀಗ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.