ರಾಮನಗರ: ಮಾಗಡಿ ತಾಲ್ಲೂಕಿನ ಕದರಯ್ಯನಪಾಳ್ಯದ ಮನೆಗೆ ನುಗ್ಗಿದ ಮಗು ಹೊತ್ತೊಯ್ದು ಕೊಂದಿದ್ದ ನರಭಕ್ಷಕ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕದರಯ್ಯನಪಾಳ್ಯದ ಮನೆಯಲ್ಲಿ ತಡರಾತ್ರಿ ಸೆಕೆ ಎಂಬ ಕಾರಣಕ್ಕೆ ಬಾಗಿಲು ತೆರೆದು ಮಲಗಿದ್ದ ವೇಳೆ ಮನೆಗೆ ನುಗ್ಗಿದ ಚಿರತೆ ಮಧ್ಯರಾತ್ರಿ ತಾಯಿಯೊಂದಿಗೆ ಮಲಗಿದ್ದ ಮೂರು ವರ್ಷದ ಬಾಲಕ ಹೇಮಂತ್‌ನನ್ನು ಹೊತ್ತೊಯ್ದಿದೆ. ಬಳಿಕ ಮನೆಯ ಸಮೀಪದ ಪೊದೆಯಲ್ಲಿ ಮಗುವನ್ನು ಅರೆಬರೆ ತಿಂದು ಹಾಕಿತ್ತು. ಚಿರತೆ ಮನೆಗೆ ನುಗ್ಗಿ ಮಗುವಿನ ಮೇಲೆ ದಾಳಿ ಮಾಡಿದ್ದ ಘಟನೆಯಿಂದ ಭಯಬೀತಗೊಂಡಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಪಟ್ಟು ಹಿಡಿದಿದ್ದರು. ಅಲ್ಲದೆ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು ಅವುಗಳನ್ನು ಸೆರೆ ಹಿಡಿದು ಚಿರತೆ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿದ್ದರು.