ರಾಮನಗರ: ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಎದುರು ಹೈಡ್ರಾಮ ನಡೆಸಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್ ಹಾಗು ಕೆಂಪೇಗೌಡ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಆರೋಪಿಗಳು ದುಂಡಾವರ್ತಿ ಪ್ರದರ್ಶಿಸಿದ್ದರು.

ಐಜೂರು ವೆಂಕಟೇಶ್, ರಾಂಪುರ ನಾಗೇಶ್, ಕೋಟೆ ಕುಮಾರ್, ಗೋವಿಂದಯ್ಯ ಹಾಗೂ ಗೌಸ್ ಪಾಷಾ ಎಂಬುವವರ ವಿರುದ್ಧ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಆರೋಪಿಗಳನ್ನು ಬಂಧಿಸಿ, ಈಗಾಗಲೇ ಜಾಮೀನಿನ ಮೇಲೆ ಬಿಟ್ಟು ಕಳುಹಿಸಲಾಗಿದೆ.
ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ ಸಂಬಂಧ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ ಡಿಕೆಶಿ