ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 31 ಮಂದಿ ವಿರುದ್ಧ ಎಫ್​ಐಆರ್​ ದಾಖಲು - ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ

Congress Makedatu Padayatra: ವಾರಾಂತ್ಯದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಹಲವರ ವಿರುದ್ದ ಎಫ್‌ಐಆರ್ ದಾಖಲಾಗಿದೆ.

fir-against-siddaramaiah-and-dk-shivakumar-on-mekedatu-padayatra
ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ

By

Published : Jan 10, 2022, 10:40 AM IST

Updated : Jan 10, 2022, 2:45 PM IST

ರಾಮನಗರ :ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ವೇಳೆ ವಾರಾಂತ್ಯದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ 31 ಮಂದಿ‌ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಪೊಲೀಸ್​​ ಠಾಣೆಯಲ್ಲಿ‌ ಎಫ್‌ಐಆರ್ ದಾಖಲಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಮೇಕೆದಾಟುನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಫ್​ಐಆರ್​​ ಪ್ರತಿ

ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆ ಮುಗಿಯುವವರೆಗೂ ಮನೆಯಲ್ಲಿ ಮಲಗುವುದಿಲ್ಲ: ಡಿಕೆಶಿ

ಕನಕಪುರದ ಕಾವೇರಿ ಸಂಗಮದಿಂದ ಕಾಂಗ್ರೆಸ್ ವತಿಯಿಂದ ನಿನ್ನೆ ಆರಂಭಗೊಂಡ ಮೇಕೆದಾಟು ಪಾದಯಾತ್ರೆಯು ಸಾಯಂಕಾಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡ ಆಲಹಳ್ಳಿ‌ ಗ್ರಾಮಕ್ಕೆ ತಲುಪಿದೆ. ಇಂದು ಮುಂದುವರೆಯಲಿದ್ದು, ಜ.19ರಂದು ಕೊನೆಯ ದಿನ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಾಗಿ ಅಲ್ಲಿ ಸಮಾರೋಪ ಸಭೆ ನಡೆಯಲಿದೆ.

ಎಫ್​ಐಆರ್​ ದಾಖಲಾದವರ ವಿವರ:

  1. ಡಿ.ಕೆ. ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ
  2. ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ
  3. ಡಿ.ಕೆ. ಸುರೇಶ್​, ಸಂಸದ
  4. ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
  5. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ
  6. ಜಿ. ಪರಮೇಶ್ವರ್​​, ಮಾಜಿ ಉಪಮುಖ್ಯಮಂತ್ರಿ
  7. ಈಶ್ವರ ಖಂಡ್ರೆ, ಶಾಸಕ
  8. ಉಮಾಶ್ರೀ, ಮಾಜಿ ಸಚಿವೆ
  9. ಬಿ.ಕೆ. ಹರಿಪ್ರಸಾದ್​, ವಿಧಾನ ಪರಿಷತ್​ ಸದಸ್ಯ
  10. ಎಂ.ಬಿ. ಪಾಟೀಲ್​, ಮಾಜಿ ಸಚಿವ
  11. ರಾಮಲಿಂಗಾರೆಡ್ಡಿ, ಮಾಜಿ ಸಚಿವ
  12. ರವಿ ಎಸ್​​., ವಿಧಾನ ಪರಿಷತ್​ ಸದಸ್ಯ
  13. ಟಿ.ಬಿ.ಜಯಚಂದ್ರ, ಮಾಜಿ ಸಚಿವ
  14. ಹೆಚ್​.ಎಂ. ರೇವಣ್ಣ, ಮಾಜಿ ಸಚಿವ
  15. ಸಲೀಂ ಅಹಮದ್​, ವಿಧಾನ ಪರಿಷತ್​ ಸದಸ್ಯ
  16. ಎನ್​.ಎ. ಹ್ಯಾರಿಸ್​, ಶಾಸಕ
  17. ಲಕ್ಷ್ಮೀ ಹೆಬ್ಬಾಳ್ಕರ್​, ಶಾಸಕಿ
  18. ವಿನಯ್​ ಕುಲಕರ್ಣಿ, ಮಾಜಿ ಸಚಿವ
  19. ಪ್ರಿಯಾಂಕ್​ ಖರ್ಗೆ, ಶಾಸಕ
  20. ಯತೀಂದ್ರ ಸಿದ್ದರಾಮಯ್ಯ, ಶಾಸಕ
  21. ಯು.ಟಿ. ಖಾದರ್​, ಶಾಸಕ
  22. ಸೌಮ್ಯ ರೆಡ್ಡಿ, ಶಾಸಕಿ
  23. ನಲಪಾಡ್​ ಹ್ಯಾರೀಸ್​, ಕಾಂಗ್ರೆಸ್​ ಯುವ ನಾಯಕ
  24. ಚೆಲುವರಾಯಸ್ವಾಮಿ, ಮಾಜಿ ಸಚಿವ
  25. ಮೋಟಮ್ಮ, ಮಾಜಿ ಸಚಿವೆ
  26. ಹೆಚ್​.ಕೆ. ಪಾಟೀಲ್​, ಮಾಜಿ ಸಚಿವ
  27. ಸಾಧುಕೋಕಿಲ, ನಟ
  28. ಸಾರಾ ಗೋವಿಂದು, ಚಲನಚಿತ್ರ ಮಂಡಳಿ ಅಧ್ಯಕ್ಷ
  29. ಜಯಮಾಲಾ, ನಟಿ
  30. ದುನಿಯಾ ವಿಜಯ್​, ನಟ
  31. 31 ವರ್ಷದ ವ್ಯಕ್ತಿ
Last Updated : Jan 10, 2022, 2:45 PM IST

ABOUT THE AUTHOR

...view details