ಕರ್ನಾಟಕ

karnataka

ETV Bharat / state

ಕನಕಪುರ ಬಳಿ ಅಪಘಾತದಲ್ಲಿ ತಂದೆ ಮಗ ಸಾವು - ರಾಮನಗರ ಅಪಘಾತ

ಅಪಘಾತದಲ್ಲಿ ತಂದೆ ಮಗ ಮೃತಪಟ್ಟ ಘಟನೆ ಕನಕಪುರ ತಾಲೂಕಿನಲ್ಲಿ ನಡೆದಿದೆ.

ಕನಕಪುರ ಬಳಿ ಅಪಘಾತದಲ್ಲಿ ತಂದೆ ಮಗ ಸಾವು
ಕನಕಪುರ ಬಳಿ ಅಪಘಾತದಲ್ಲಿ ತಂದೆ ಮಗ ಸಾವು

By

Published : Nov 11, 2022, 4:22 PM IST

ರಾಮನಗರ:ಕನಕಪುರ ತಾಲೂಕಿನ ತೋಟಹಳ್ಳಿ ಗ್ರಾಮದ ಬಳಿ ಟಾಟಾ ಸಫಾರಿ ಹಾಗೂ ಟಿವಿಎಸ್​ ಎಕ್ಸೆಲ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಂದೆ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೋಟಹಳ್ಳಿ ಗ್ರಾಮದ ಚಿಕ್ಕಪುಟ್ಟಯ್ಯ (60) ಮತ್ತು ಅವರ ಮಗ ಮಹೇಶ್ (30) ಮೃತಪಟ್ಟವರು.

ಅಪಘಾತದಲ್ಲಿ ತಂದೆ ಮಗ ಸಾವು: ಚಿಕ್ಕಪುಟ್ಟಯ್ಯ ಮತ್ತು ಅವರ ಮಗ ತೋಟಹಳ್ಳಿ ಗ್ರಾಮದಿಂದ ಒಂಟಿ ಮನೆಯ ಹತ್ತಿರ ದ್ವಿಚಕ್ರ ವಾಹನದಲ್ಲಿ ಬರುವಾಗ ಸಾತನೂರು ಕಡೆಯಿಂದ ಬಂದ ಶಿವಮಾದು ಎಂಬುವರಿಗೆ ಸೇರಿದ ಟಾಟಾ ಸಫಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಅಪ್ಪ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕನಕಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

(ಓದಿ: ರಸ್ತೆ ಅಪಘಾತ : ತಂದೆ, ಮಗಳು ಸಾವು, ತಾಯಿ ಸ್ಥಿತಿ ಗಂಭೀರ)

ABOUT THE AUTHOR

...view details