ಕರ್ನಾಟಕ

karnataka

ETV Bharat / state

ರಾಮನಗರ, ಹುಬ್ಬಳ್ಳಿಯೂ ಮೊಳಗಿದ ರೈತರ ಹೋರಾಟದ ಕೂಗು - ರೈತರ ಹೋರಾಟ

ಭೂ ಸುಧಾರಣೆ ಕಾಯ್ದೆ ವಿರೋಧಿಸಿ ರಾಮನಗರದಲ್ಲಿಯೂ‌ ಪ್ರತಿಭಟನೆ ಆರಂಭವಾಗಿದೆ. ಇತ್ತ ಹುಬ್ಬಳ್ಳಿ ಸ್ಪೋಟ್ಸ್​ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ನಾಗರಿಕರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.

farmer's  parade
ರಾಮನಗರ, ಹುಬ್ಬಳ್ಳಿಯೂ ಮೊಳಗಿದ ರೈತರ ಹೋರಾಟದ ಕೂಗು

By

Published : Jan 26, 2021, 1:22 PM IST

ರಾಮನಗರ:ಭೂ ಸುಧಾರಣೆ ಕಾಯ್ದೆ ವಿರೋಧಿಸಿ ರಾಮನಗರದಲ್ಲಿಯೂ‌ ಪ್ರತಿಭಟನೆ ಆರಂಭವಾಗಿದೆ.

ರಾಮನಗರ, ಹುಬ್ಬಳ್ಳಿಯೂ ಮೊಳಗಿದ ರೈತರ ಹೋರಾಟದ ಕೂಗು

ಜಿಲ್ಲೆಯ ಬಿಡದಿ ಭೈರಮಂಗಲ ಕ್ರಾಸ್ ಬಳಿ ರೈತರು ಜಮಾವಣೆಗೊಳ್ಳುತ್ತಿದ್ದಾರೆ. ಈಗಾಗಲೇ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಯ ನೂರಾರು ರೈತರು ಜಮಾವಣೆಗೊಂಡಿದ್ದಾರೆ. ಬಸ್, ಟೆಂಪೊ, ಮಿನಿ ಬಸ್​​ಗಳಲ್ಲಿ ರೈತರು ಪ್ರತಿಭಟನೆಗೆ ಆಗಮಿಸುತ್ತಿದ್ದು, ಬಿಡದಿಯಲ್ಲಿ ಒಂದೆಡೆ ಸೇರಿ ಇಲ್ಲಿಂದ ಬೆಂಗಳೂರಿಗೆ ತೆರಳುತ್ತಿದ್ದಾರೆ.

ಹುಬ್ಬಳ್ಳಿಯ ಸ್ಪೋರ್ಟ್ಸ್ ಮೈದಾನದಲ್ಲಿ ಮೊಳಗಿದ ರೈತರ ಹೋರಾಟದ ಕೂಗು:

ಹುಬ್ಬಳ್ಳಿ ಸ್ಪೋರ್ಟ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ನಾಗರಿಕರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸ್ಪೋಟ್ಸ್​ ಗ್ರೌಂಡ್​ ಬಚಾವ್ ಸಮಿತಿ ಹಾಗೂ ಹುಬ್ಬಳ್ಳಿ ನಾಗರಿಕರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರೈತ ಪರ ಘೋಷಣೆ ಕೂಗಿ ಬೆಂಬಲ ಸೂಚಿಸಿದರು. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ABOUT THE AUTHOR

...view details