ಕರ್ನಾಟಕ

karnataka

ETV Bharat / state

ಬೆನ್ನಮೇಲೆ 'ಯುವರಾಜ ನಿಖಿಲ್ ಗೌಡ'! ಅಭಿಮಾನಿಯಿಂದ ವಿಶೇಷ ಟ್ಯಾಟೂ - ದರ್ಶನ್

ನಿಖಿಲ್ ಕುಮಾರಸ್ವಾಮಿ ಅಭಿಮಾನಿಯೊಬ್ಬ ಅವರ​ ಭಾವಚಿತ್ರವನ್ನು ಟ್ಯಾಟು ಹಾಕಿಸಿಕೊಂಡು ಸುದ್ದಿಯಾಗಿದ್ದಾನೆ.

ನಿಖಿಲ್​ ಅಭಿಮಾನಿಯಿಂದ ಟ್ಯಾಟೂ

By

Published : Jun 8, 2019, 10:13 PM IST

ರಾಮನಗರ: ಇತ್ತೀಚಿಗಷ್ಟೇ ದಚ್ಚು ಅಭಿಮಾನಿಯೊಬ್ಬ ಸಂಗೊಳ್ಳಿ ರಾಯಣ್ಣ ಚಿತ್ರದ ದರ್ಶನ್ ಫೊಟೋವನ್ನು ಬೆನ್ನಿನ‌ ಮೇಲೆ ಟ್ಯಾಟೂ ಹಾಕಿಸಿಕೊಂಡು ಸುದ್ದಿಯಾಗಿದ್ದ.ಇದೀಗ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಅಭಿಮಾನಿಯ ಸರದಿ. ನಿಖಿಲ್‌ ಮೇಲಿನ ಅಭಿಮಾನಕ್ಕೆ ತನ್ನ ಬೆನ್ನಿನ ಮೇಲೆ ಅಭಿಮನ್ಯು ವೇಷದ ನಿಖಿಲ್ ಭಾವಚಿತ್ರವನ್ನೇ ಇಲ್ಲೊಬ್ಬ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ನಿಖಿಲ್​ ಅಭಿಮಾನಿಯಿಂದ ಟ್ಯಾಟೂ

ರಾಮನಗರ ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದ ಚನ್ನೇಗೌಡ ಎಂಬ ಯುವಕ ತನ್ನ ಬೆನ್ನಿನ ಮೇಲೆ ನಿಖಿಲ್ ಕುಮಾರಸ್ವಾಮಿಯ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ತೋರ್ಪಡಿಸಿದ್ದಾನೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿರುವ ಅಭಿಮನ್ಯು ಪಾತ್ರದ ಗೆಟಪ್​ ಅನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ರಾಮನಗರದ ಮಧು ಟ್ಯಾಟೂ ಸೆಂಟರ್‌ನಲ್ಲಿ ಸುಮಾರು 7 ಗಂಟೆಗಳ ಕಾಲ ಟ್ಯಾಟೂ ಬಿಡಿಸಲಾಗಿದೆಯಂತೆ. ಅಲ್ಲದೇ ನಿಖಿಲ್ ಭಾವಚಿತ್ರದ ಕೆಳಗಡೆ 'ಯುವರಾಜ ನಿಖಿಲ್‌ಗೌಡ' ಎಂದೂ ಬರೆಯಲಾಗಿದೆ. ನಿಖಿಲ್ ಟ್ಯಾಟೂ ನೋಡಲು ಯುವಕರ ದಂಡೇ ಟ್ಯಾಟೂ ಸೆಂಟರ್‌ಗೆ ಮುಗಿಬಿದ್ದಿತ್ತು.

ಇತ್ತೀಚೆಗೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಷ್​ ಪ್ರಚಾರ ಕಾರ್ಯದಲ್ಲಿ ಸಾರಥಿಯಾಗಿದ್ದ ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಅಭಿಮಾನಿಯೊಬ್ಬ ಸಂಗೊಳ್ಳಿ ರಾಯಣ್ಣ ಗೆಟಪ್​ನ ಟ್ಯಾಟೂವನ್ನು ಹಾಕಿಸಿಕೊಂಡಿದ್ದ. ಇದೀಗ ನಿಖಿಲ್ ಕುಮಾರಸ್ವಾಮಿಯ ಭಾವಚಿತ್ರವನ್ನೂ ನಿಖಿಲ್ ಅಭಿಮಾನಿ ತನ್ನ ಬೆನ್ನ ಮೇಲೆ ಹಾಕಿಸಿಕೊಂಡಿದ್ಧಾನೆ. ಈ ಮೂಲಕ ರಾಮನಗರದಲ್ಲಿ ನಟ ದರ್ಶನ್ ಹಾಗೂ ನಟ ನಿಖಿಲ್ ಅಭಿಮಾನಿಗಳ ನಡುವೆ ಟ್ಯಾಟೂ ಕೌಂಟರ್‌ ವಾರ್​ಗಳು ಶುರುವಾಗಿದೆ ಎನ್ನಲಾಗ್ತಿದೆ.

ABOUT THE AUTHOR

...view details