ರಾಮನಗರ:ಯಾರೇ ಆಗಲಿ ರಾಜಕೀಯವಾಗಿ ಮಾತನಾಡಲಿ ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈ ಬಾರಿ ಸಿಂದಗಿ - ಹಾನಗಲ್ನಲ್ಲಿ ಬಿಜೆಪಿ ಗೆಲ್ಲುತ್ತದೆ, ನನಗೆ ಈ ಬಗ್ಗೆ ಮಾಹಿತಿ ಇದೆ. ಆದರೆ ಚುನಾವಣಾ ಪ್ರಚಾರ ಭರಾಟೆಯಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಬಾರದು. ಚುನಾವಣಾ ಬಿರುಸಿನಲ್ಲಿ ಆಯ ತಪ್ಪಿ, ಅಳತೆ ತಪ್ಪಿ ಮಾತನಾಡಿದ್ದಾರೆ, ಅದು ತಪ್ಪು ಎಂದರು.