ಕರ್ನಾಟಕ

karnataka

ETV Bharat / state

'ಬೈಎಲೆಕ್ಷನ್ ನಡೆಯುವುದೇ ಹಣ ಬಲದಿಂದ, ಹಾಗಾಗಿ ನಾನು ಹೆಚ್ಚಿನ ಆದ್ಯತೆ ನೀಡಲ್ಲ'

ಎರಡೂ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕುವುದರಲ್ಲಿ ನಾವು ಎಡವಿಲ್ಲ. ನಮ್ಮ‌ ಅಭ್ಯರ್ಥಿಗಳು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್​ಗೆ ಹೋದ್ರು. ಆದ್ರೆ, ಅಲ್ಲಿ‌ ಅವರು ಮಾಡಿದ್ದಾದ್ರೂ ಏನು? ಎಂದು ಹೆಚ್‌ಡಿಕೆ ಪ್ರಶ್ನಿಸಿದರು.

ex cm HD Kumaraswamy reaction on by election result
ಬೈ ಎಲೆಕ್ಷನ್​ ಫಲಿತಾಂಶ ಕುರಿತು ಹೆಚ್​ಡಿಕೆ ಸುದ್ದಿಗೋಷ್ಟಿ

By

Published : Nov 2, 2021, 3:23 PM IST

ರಾಮನಗರ:ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲು ಅನುಭವಿಸಿದೆ. ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.


ರಾಮನಗರ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ ಫಲಿತಾಂಶ ನಿರೀಕ್ಷಿಸಿರಲಿಲ್ಲ. ನಮ್ಮ ಸಂಘಟನೆಯಲ್ಲಿ ಕೊರತೆ ಉಂಟಾಗಿತ್ತು. ನಾನು ಕಾರ್ಯಕರ್ತರ ಒತ್ತಾಸೆಯ ಮೇಲೆ ಅಭ್ಯರ್ಥಿಗಳನ್ನು ಹಾಕಿದ್ದೆ.

ಹಾನಗಲ್​​ನಲ್ಲಿ ನಮಗೆ ತಳಹದಿಯೇ ಇಲ್ಲ. ನಾನು ಉಪಚುನಾವಣೆಗೆ ಹೆಚ್ಚಿನ ಆದ್ಯತೆ ನೀಡಲ್ಲ. ಆದರೆ, ಸಿಂದಗಿ ‌ಕ್ಷೇತ್ರದಲ್ಲಿ‌ ನಿರೀಕ್ಷೆ ಇತ್ತು. ಈ‌ ಫಲಿತಾಂಶ ನನಗೆ ನಿರಾಶೆ ತಂದಿದೆ ಎಂದರು.


ಹಾನಗಲ್​​ನಲ್ಲಿ ನಮಗೆ ಬೇಸ್ ಇಲ್ಲ. ಆದ್ರೆ, ಮೊದಲೆಲ್ಲಾ ಸಿಂದಗಿಯಲ್ಲಿ ಬಿಜೆಪಿಗೆ ಫೈಟ್ ಕೊಟ್ಟಿದ್ದು ನಾವೇ. 8ನೇ ತಾರೀಖಿನಿಂದ ಒಂದು ವಾರಗಳ ಕಾಲ 30 ಜಿಲ್ಲೆಯ ಕಾರ್ಯಕರ್ತರ ಜತೆ ಸಭೆ ಕರೆದಿದ್ದೇನೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಉಪಚುನಾವಣೆಯಲ್ಲಿ ಹಣ ದೊಡ್ಡ ಮಟ್ಟದಲ್ಲಿ ಬಿಂಬಿತವಾಗಿದೆ. ನಾವು ಹಣ ಹಂಚಿಲ್ಲ. ಆದ್ರೆ, ರಾಷ್ಟ್ರೀಯ ಪಕ್ಷಗಳು ಹಣ ಹಂಚಿವೆ ಎಂದು ಆರೋಪಿಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಹಣಬಲ ನಡೆಯುವುದಿಲ್ಲ‌. ಆದ್ರೆ, ಉಪಚುನಾವಣೆ ನಡೆಯುವುದೇ ಹಣ ಬಲದಿಂದ. ಮುಂದಿನ ಚುನಾವಣೆಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ನಿಮ್ಮ ಪರವಾಗಿರುತ್ತೇವೆ ಎಂದು ಎರಡೂ ಕ್ಷೇತ್ರದ ಜನರು ತಿಳಿಸಿದ್ದಾರೆ ಎಂದರು.

ಎರಡೂ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನ‌ು ಹಾಕುವುದರಲ್ಲಿ ನಾವು ಎಡವಿಲ್ಲ. ನಮ್ಮ‌ ಅಭ್ಯರ್ಥಿಗಳು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್​ಗೆ ಹೋದರು. ಆದ್ರೆ, ಅಲ್ಲಿ‌ ಅವರು ಮಾಡಿದ್ದಾದ್ರೂ ಏನು? ಎಂದು ಪ್ರಶ್ನೆ‌ ಮಾಡಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಏನಾಗಲಿದೆ ಎಂಬುದನ್ನು ನೋಡಿ, ಆಗ ಕಾಂಗ್ರೆಸ್​ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.

ಸಾರ್ವತ್ರಿಕ ಚುನಾವಣೆಗೂ ಬೈ ಎಲೆಕ್ಷನ್​​ಗೂ ತುಂಬಾ ವ್ಯತ್ಯಾಸವಿದೆ. ನಾವು ಎಷ್ಟೇ ಅಭಿವೃದ್ಧಿ ಮಾಡಿದರೂ ಸಹ ಜನ ನಮ್ಮನ್ನು ಮರೆಯುತ್ತಾರೆ. ಅಭಿವೃದ್ಧಿ ಆದಾಗ ಕೆಲವು ದಿನ‌ಗಳು ಮಾತ್ರ ಮಾತನಾಡುತ್ತಾರೆ. ಆದ್ರೆ, ನಮ್ಮ ಕಾರ್ಯಕರ್ತರು ಬದಲಾವಣೆಯಾದಾಗ ಜನರು ಚೇಂಜ್‌ ಆಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:ಸಿಂದಗಿಯಲ್ಲಿ ಬಿಜೆಪಿಗೆ ಗೆಲುವು : ರಮೇಶ ಭೂಸನೂರ್‌ಗೆ ಬಿಎಸ್‌ವೈ ಅಭಿನಂದನೆ

ABOUT THE AUTHOR

...view details