ರಾಮನಗರ:ಅಪರೇಷನ್ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಚಾಲನೆ ನೀಡಿದ್ದಾರೆ. ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.
ಪುಂಡಾನೆ ಸೆರೆ ಹಿಡಿಯಲು ಬಂದಿದ್ದ ಆನೆಗಳಿಗೆ ಬೆಲ್ಲದ ಸಿಹಿ ತಿನ್ನಿಸುವ ಮೂಲಕ ಯೋಗೇಶ್ವರ್ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು. ಐದು ಆನೆಗಳಾದ ಭೀಮ, ಹರ್ಷ, ಪ್ರಶಾಂತ್, ಲಕ್ಷ್ಮಣ, ಗಣೇಶ ಆನೆಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆಪರೇಷನ್ ಕಾಡಾನೆ ಕಾರ್ಯಾಚರಣೆಗೆ ಚಾಲನೆ ಪುಂಡಾನೆ ಸೆರೆಗೆ ಕಾರ್ಯಾಚರಣೆ: ಇತ್ತೀಚಿಗೆ ರಾಮನಗರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಾಡಿನಿಂದ ಬಂದ ಆನೆಯೊಂದು ಮಹಿಳೆಯೋರ್ವರನ್ನು ಮನೆಯ ಬಳಿಯೇ ತುಳಿದು ಸಾಯಿಸಿತ್ತು. ಇದರಿಂದ ತಾಲೂಕಿನಾದ್ಯಂತ ವ್ಯಾಪಕವಾದ ಟೀಕೆಗಳು ವ್ತಕ್ತವಾಗಿದ್ದು, ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಪುಂಡಾನೆ ಸೆರೆ ಹಿಡಿಯುವಂತೆ ಎಲ್ಲೆಡೆಯಿಂದ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರದಿಂದ ಆನೆಗಳ ಸೆರೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭವಾಗಿದ್ದು, ದುಬಾರೆ ಹಾಗೂ ಮತ್ತಿಗೋಡು ಕ್ಯಾಂಪ್ನಿಂದ ಆನೆಗಳು ಬಂದಿವೆ.
ಇದನ್ನೂ ಓದಿ:VIDEO: ನಾಗರ ಹಾವಿನ ಕಡಿತದಿಂದ ಮಗನನ್ನು ಕಾಪಾಡಿದ್ರು ತಾಯಿ