ರಾಮನಗರ:ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಮುಗ್ಗೂರು ಅರಣ್ಯ ಪ್ರದೇಶದ ಮರಳೀಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.
ಬನ್ನಿಮುಕ್ಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮರಳೀಪುರ ಗ್ರಾಮದ ರುದ್ರೇಗೌಡ ಮತ್ತು ಮತ್ತಿತರರಿಗೆ ಸೇರಿದ ಜಮೀನಿನಲ್ಲಿ ಭತ್ತ ಮತ್ತು ರಾಗಿ ಫಸಲು ರಕ್ಷಣೆಗಾಗಿ ಜಮೀನಿನ ಸುತ್ತಲೂ ಬಿಟ್ಟಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟಿದೆ.