ರಾಮನಗರ:ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಆನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಮನಗರ: ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಆನೆ ಸಾವು - ರಾಮನಗರ ಲೇಟೆಸ್ಟ್ ನ್ಯೂಸ್
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಆನೆಯೊಂದು ಸಾವನ್ನಪ್ಪಿದೆ.
![ರಾಮನಗರ: ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಆನೆ ಸಾವು Elephant died](https://etvbharatimages.akamaized.net/etvbharat/prod-images/768-512-12871946-thumbnail-3x2-bngjpg.jpg)
ಕಳೆದೊಂದು ವಾರದ ಹಿಂದೆಯೇ ಸುಮಾರು 35 ವರ್ಷದ ಗಂಡಾನೆ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆನೆ ಕುಳಿತುಕೊಳ್ಳುವ ಸಮಯದಲ್ಲಿ ಎದೆ ಭಾಗಕ್ಕೆ ಪೆಟ್ಟಾಗಿ ಮತ್ತೆ ಮೇಲಕ್ಕೆ ಏಳಲಾಗದೇ ಹೃದಯಾಘಾತವಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಆನೆಗಳ ತಜ್ಞ ನಿಶಾಂತ್ ತಿಳಿಸಿದರು.
ಈ ಭಾಗದಲ್ಲಿ 15ಕ್ಕೂ ಹೆಚ್ಚು ಆನೆಗಳಿವೆ. ಸ್ಥಳದಲ್ಲೇ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ನಂತರ ಆನೆ ಸಾವಿಗೆ ನಿಖರ ಕಾರಣ ತಿಳಿಯಲು ಆನೆ ದೇಹದ ಕೆಲ ಭಾಗಗಳನ್ನು ಸಂಗ್ರಹಾಲಯಕ್ಕೆ ಕಳುಹಿಸಲಾಗುತ್ತದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಆನೆ ಸಾವನ್ನಪ್ಪಿರುವುದರಿಂದ ದೇಹ ಕೊಳೆತಿದೆ ಎಂದು ಎಸಿಎಫ್ ಸಿಬ್ಬಂದಿ ಸೀಮಾ ಮಾಹಿತಿ ನೀಡಿದರು.