ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಪುಂಡಾನೆ ಸೆರೆ, ಗ್ರಾಮಸ್ಥರ ಎಚ್ಚರಿಕೆಗೆ ಮಣಿದ ಅರಣ್ಯ ಇಲಾಖೆ - ಕಾಡಾನೆ ಸೆರೆ

ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಸುಮಾರು 25 ವರ್ಷ ವಯೋಮಾನದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ರಾಮನಗರದಲ್ಲಿ ಪುಂಡಾನೆ ಸೆರೆ
ರಾಮನಗರದಲ್ಲಿ ಪುಂಡಾನೆ ಸೆರೆ

By

Published : Aug 19, 2022, 10:43 PM IST

ರಾಮನಗರ:ಚನ್ನಪಟ್ಟಣ ತಾಲೂಕಿನ ಬಿ ವಿ ಹಳ್ಳಿ ಗ್ರಾಮದ ತೆಂಗಿನಕಲ್ಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುಂಡಾಟ ನಡೆಸುತ್ತಿದ್ದ ಮತ್ತೊಂದು ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಈ ಭಾಗದಲ್ಲಿ ಇನ್ನೊಂದು ಪುಂಡಾನೆಗಳನ್ನು ಹಿಡಿಯಲು ಅನುಮತಿ ದೊರೆತಿದ್ದು, ಒಂದು ಕಾಡಾನೆಯನ್ನು ಕಳೆದ ಐದಾರು ದಿನಗಳ ಹಿಂದೆ ಸೆರೆಹಿಡಿಯಲಾಗಿದೆ. ಸೆರೆಸಿಕ್ಕ ಆನೆಯನ್ನು ಮಲೆ ಮಹದೇಶ್ವರ ಬೆಟ್ಟ ಮೀಸಲು‌ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ರಾಮನಗರದಲ್ಲಿ ಪುಂಡಾನೆ ಸೆರೆ

ABOUT THE AUTHOR

...view details