ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಮತ್ತೆ ಕಾಡಾನೆ ಉಪಟಳ... ಪಪ್ಪಾಯ ತೋಟಕ್ಕೆ ಲಗ್ಗೆ - ಪರಂಗಿ ಬೆಳೆ ನಾಶ

ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ‌ ಹೊಂದಿಕೊಂಡಿರುವ ಸುತ್ತಮುತ್ತಲ‌ ಗ್ರಾಮಗಳಲ್ಲಿ ಸಂಚರಿಸಿರುವ ಆನೆ, ದೇವರದೊಡ್ಡಿ ಉಮೇಶ್ ಎಂಬುವರಿಗೆ ಸೇರಿದ ಪಪ್ಪಾಯ ತೋಟಕ್ಕೆ ಲಗ್ಗೆ ಇಟ್ಟು ನಾಶಪಡಿಸಿದೆ.

Elephant attack to papaya plantation at Ramanagara
ರಾಮನಗರದಲ್ಲಿ ಮತ್ತೆ ಹೆಚ್ಚಾಯ್ತು 'ಕಾಡಾನೆ' ಉಪಟಳ

By

Published : May 21, 2020, 1:17 PM IST

ರಾಮನಗರ:ತಾಲೂಕಿನ ಕೈಲಾಂಚ ಹೋಬಳಿಯ ದೇವರದೊಡ್ಡಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಪಪ್ಪಾಯ ಬೆಳೆ ನಾಶವಾಗಿದೆ.

ಅಲ್ಲದೇ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ‌ ಹೊಂದಿಕೊಂಡಿರುವ ಸುತ್ತಮುತ್ತಲ‌ ಗ್ರಾಮಗಳಲ್ಲಿ ಸಂಚರಿಸಿರುವ ಆನೆ, ದೇವರದೊಡ್ಡಿ ಉಮೇಶ್ ಎಂಬುವರಿಗೆ ಸೇರಿದ ಪಪ್ಪಾಯ ತೋಟಕ್ಕೆ ಲಗ್ಗೆ ಇಟ್ಟು ನಾಶಪಡಿಸಿದೆ.

ರಾಮನಗರದಲ್ಲಿ ಮತ್ತೆ ಹೆಚ್ಚಾಯ್ತು ಕಾಡಾನೆ ಉಪಟಳ

ಹಾಗೆಯೇ ತೋಟದಲ್ಲಿದ್ದ ಶೆಡ್, ಕಾಂಪೌಂಡ್ ಕೂಡಾ ನಾಶ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕಾಡನಕುಪ್ಪೆ ಭಾಗದಿಂದ ಬಂದು ತೆಂಗನಕಲ್ಲು ಅರಣ್ಯದ ಕಡೆ ಹೋಗಿರುವ ಅದರ ಹೆಜ್ಜೆ ಗುರುತುಗಳನ್ನು ನೋಡಿ ಪತ್ತೆ‌ ಹಚ್ಚಿರುವ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ರಾಮನಗರ ಗ್ರಾಮಾಂತರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ರೈತ ಉಮೇಶ್ ಒತ್ತಾಯಿಸಿದ್ದಾರೆ.

ABOUT THE AUTHOR

...view details