ಕರ್ನಾಟಕ

karnataka

ETV Bharat / state

ರಾಮನಗರ: ಗಣೇಶ ನಿಮಜ್ಜನ ವೇಳೆ ಹಾರ್ನ್‌ ಹಾಕಿದ ಚಾಲಕನಿಗೆ ಹಲ್ಲೆ, ವಾಹನಕ್ಕೆ ಕಲ್ಲು - ವಾಹನದ ಮೇಲೆ ಕಲ್ಲು ತೂರಾಟ

ಗಣೇಶ ನಿಮಜ್ಜನ ಸಂದರ್ಭದಲ್ಲಿ ಹಾರ್ನ್ ಮಾಡಿದ ಚಾಲಕನ ಮೇಲೆ ಕೆಲವರು ಹಲ್ಲೆ ಮಾಡಿದ ಘಟನೆ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.

assault on driver
ಚಾಲಕನ ಮೇಲೆ ಹಲ್ಲೆ

By ETV Bharat Karnataka Team

Published : Sep 25, 2023, 10:24 AM IST

ರಾಮನಗರ: ಗಣೇಶ ನಿಮಜ್ಜನಕ್ಕೆ ಹೋಗುವ ಸಂದರ್ಭದಲ್ಲಿ ಹಾರ್ನ್ ಮಾಡಿದ ಬೊಲೆರೋ ವಾಹನದ ಚಾಲಕನ ಮೇಲೆ ಆಯೋಜಕರು ಹಲ್ಲೆ ಮಾಡಿ, ವಾಹನದ ಮೇಲೆ ಕಲ್ಲು ತೂರಿದ ಘಟನೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಚಲ್ಲಮ್ಮ ದೇವಾಲಯದ ಬಳಿ ನಡೆದಿದೆ. ಮೆಂಗಹಳ್ಳಿ ಗ್ರಾಮದ ಮನೋಜ್ ಹಲ್ಲೆಗೊಳಗಾದ ಚಾಲಕ.

ಮನೋಜ್ ಪ್ರತಿದಿನ ರಾತ್ರಿ ಅಕ್ಕಪಕ್ಕದ ಗ್ರಾಮಗಳ ರೈತರ ತರಕಾರಿಯನ್ನು ಬೆಂಗಳೂರಿನ ಮಾರುಕಟ್ಟೆಗೆ ವಾಹನದಲ್ಲಿ ಸಾಗಿಸುತ್ತಿದ್ದರು. ಅದೇ ರೀತಿ ಕಳೆದ ರಾತ್ರಿ ಸಹ ಟೊಮೆಟೊ ತುಂಬಿಕೊಂಡು ಹೋಗುತ್ತಿದ್ದರು. ಕಡ್ಲೂರು ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಯುವಕರು ಗಣೇಶ ನಿಮಜ್ಜನಕ್ಕೆ ತೆರಳುತ್ತಿದ್ದರು. ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರಿಂದ ಮನೋಜ್ ದಾರಿ ಬಿಡುವಂತೆ ಹಾರ್ನ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಕೆಲವರು ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ ವಾಹನದ ಮೇಲೆ ಕಲ್ಲು ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಾಯಾಳು ಚಾಲಕ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನೃತ್ಯಕ್ಕೆ ಅಡ್ಡಿ ಮಾಡಿದನೆಂದು ಹಲ್ಲೆ: ಡಿಜೆ ಹಾಕಿಕೊಂಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುವಾಗ ಹಾರ್ನ್ ಮಾಡಿದೆ. ಇದರಿಂದಾಗಿ ಅಡ್ಡಿಯಾಯಿತು ಎಂದು ಅಲ್ಲಿದ್ದ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದರು. ವಾಹನದ ಮುಂಭಾಗದ ಗಾಜು ಒಡೆದರು ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಗಣೇಶ ನಿಮಜ್ಜನ-ಈದ್‌ ಮಿಲಾದ್: ಹುಬ್ಬಳ್ಳಿಯಲ್ಲಿ ಮೆರವಣಿಗೆ ಮುಂದೂಡಿದ ಮುಸ್ಲಿಮರು

ABOUT THE AUTHOR

...view details