ರಾಮನಗರ: ಕೋಡಿಹಳ್ಳಿಯ ಡಿ.ಕೆ.ಬ್ರದರ್ಸ್ ನಿವಾಸದಲ್ಲಿ ಹೈಕೋರ್ಟ್ ನಿರ್ದೇಶನದ ಮೇಲೆ ಡಿಕೆಶಿ ತಾಯಿ ಗೌರಮ್ಮ ವಿಚಾರಣೆಗೆ ಬಂದಿರುವಾಗ ಇಡಿ ಅಧಿಕಾರಿಯೊಬ್ಬರು ಮಹಡಿ ಮೇಲಿನ ವರಾಂಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಮಾಜಿ 'ಪವರ್'ಫುಲ್ ಸಚಿವರ ಮನೆಯಲ್ಲಿ ಇಡಿ ಅಧಿಕಾರಿ ಸೆಲ್ಫಿ - ಡಿ.ಕೆ ಶಿವಕುಮಾರ್ ಮನೆಯಲ್ಲಿ ಇಡಿ ಅಧಿಕಾರಗಳ ವಿಚಾರಣೆ
ಮಾಜಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಅವರ ತಾಯಿ ಗೌರಮ್ಮ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
![ಮಾಜಿ 'ಪವರ್'ಫುಲ್ ಸಚಿವರ ಮನೆಯಲ್ಲಿ ಇಡಿ ಅಧಿಕಾರಿ ಸೆಲ್ಫಿ dswdd](https://etvbharatimages.akamaized.net/etvbharat/prod-images/768-512-6035718-thumbnail-3x2-vish.jpg)
ಮಾಜಿ ಪವರ್ ಮಿನಿಸ್ಟರ್ ಡಿಕೆಶಿ ಮನೆಯಲ್ಲಿ ಇಡಿ ಅಧಿಕಾರಿ ಸೆಲ್ಫಿ!
ಮಾಜಿ ಪವರ್ ಮಿನಿಸ್ಟರ್ ಡಿಕೆಶಿ ಮನೆಯಲ್ಲಿ ಇಡಿ ಅಧಿಕಾರಿ ಸೆಲ್ಫಿ
ವಿಚಾರಣೆ ನಡೆಯುತ್ತಿರುವ ಮಹಡಿಯ ಕಾರಿಡಾರ್‌ನಲ್ಲಿ ನಿಂತು ಸೆಲ್ಫಿ ತೆಗೆದುಕೊಂಡ ಅಧಿಕಾರಿ ನಂತರ ವಿಚಾರಣಾ ಕೊಠಡಿಗೆ ತೆರಳಿದರು. ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ವಿಚಾರಣೆ ವೇಳೆ ಭಾಷಾ ತೊಡಕಿನ ಪರಿಣಾಮ ಭಾಷಾನುವಾದಕರನ್ನೂ ಅಧಿಕಾರಿಗಳು ಜೊತೆಗೆ ಕರೆತಂದಿದ್ದಾರೆ. ಅಲ್ಲದೇ ಗೌರಮ್ಮ ಪರ ಡಿ.ಕೆ.ಶಿ ಪುತ್ರಿ ಐಶ್ವರ್ಯ, ಅಜ್ಜಿಗೆ ಭಾಷಾನುವಾದಕ್ಕೆ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ವಿಚಾರಣೆ ಮಧ್ಯಾಹ್ನ ಒಂದು ಗಂಟೆಗೆ ಆರಂಭವಾಗಿದೆ.