ಕರ್ನಾಟಕ

karnataka

ETV Bharat / state

ಹುಟ್ಟೂರಿನಲ್ಲಿ ಕುಟುಂಬ ಸಮೇತ ಡಿಕೆಶಿ ಮತದಾನ - undefined

ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಈ ವೇಳೆ ಕೇಂದ್ರ ಸರ್ಕಾರದ ವೈಫಲ್ಯತೆಗಳ ಬಗ್ಗೆ ಅವರು ಟೀಕೆ ಮಾಡಿದರು.

ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಡಿಕೆಶಿ

By

Published : Apr 18, 2019, 6:24 PM IST

ರಾಮನಗರ:ದೇಶದಲ್ಲೆಲ್ಲೂ ಮೋದಿ ಅಲೆ ಇಲ್ಲ, ಅವೆಲ್ಲಾ ಕೇವಲ ಊಹಾಪೋಹಳಷ್ಟೇ ಎಂದು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಮತದಾನ ಮಾಡಿದ ಬಳಿಕ ಅವರು ಮಾತನಾಡಿದರು.

ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಡಿಕೆಶಿ

ಕೇಂದ್ರ ಸರ್ಕಾರದ ಆಡಳಿತ ವಿಫಲವಾಗಿದ್ದು,ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಮೋದಿ ಅಧಿಕಾರಕ್ಕೆ‌ ಬರುವ ಮುನ್ನ 6೦, 70 ವರ್ಷಗಳ ಕಾಲ ಜನ ಬದುಕಲಿಲ್ಲವೇ..? ಮಾತು‌ ಕೊಟ್ಟಂತೆ ಅವರು ಯಾವ ಕೆಲಸ ಮಾಡಿದ್ದಾರೆ ಹೇಳಿ.. ಯುವಕರಿಗೆ ಉದ್ಯೋಗ ಸೃಷ್ಟಿ ಆಗಿದೆಯೇ..? ಸ್ವಚ್ಛ ಭಾರತ್ ಯೋಜನೆ ಎನ್ನುತ್ತಿದ್ದಾರೆ, ಆದರೆ ವಾರಣಾಸಿಯಲ್ಲಿಯೇ ಸ್ವಚ್ಚಭಾರತ್ ನಡೆಯಲಿಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಡಿಕೆಶಿ, ಈ ಬಾರಿ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

For All Latest Updates

TAGGED:

ABOUT THE AUTHOR

...view details