ಕರ್ನಾಟಕ

karnataka

ETV Bharat / state

ಕನಕಪುರ ವೈದ್ಯಕೀಯ ಕಾಲೇಜು ರದ್ದತಿ: ಹೋರಾಟದ ಎಚ್ಚರಿಕೆ ನೀಡಿದ ಡಿಕೆಶಿ - DKS News For Kanaka pura

ಕನಕಪುರ ತಾಲೂಕಿಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸಿಎಂ ಯಡಿಯೂರಪ್ಪಗೆ ಡಿಕೆಶಿ ಪತ್ರ
ಸಿಎಂ ಯಡಿಯೂರಪ್ಪಗೆ ಡಿಕೆಶಿ ಪತ್ರ

By

Published : Dec 7, 2019, 3:29 PM IST

ರಾಮನಗರ: ಕನಕಪುರ ತಾಲೂಕಿಗೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸಿಎಂ ಯಡಿಯೂರಪ್ಪಗೆ ಡಿಕೆಶಿ ಪತ್ರ

ಕನಕಪುರದ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಡಿಕೆಶಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಕೊಟ್ಟಿರುವುದಕ್ಕೆ ನನ್ನ ಅಭ್ಯಂತರವಿಲ್ಲ, ಆದರೆ ಕನಕಪುರಕ್ಕೆ ಮಂಜೂರಾಗಿದ್ದನ್ನು ರದ್ದುಮಾಡಿರುವುದಕ್ಕೆ ಅಷ್ಟೇ ಆಕ್ಷೇಪವಿದೆ ಎಂದಿದ್ದಾರೆ.

ಕೂಡಲೇ ಕನಕಪುರಕ್ಕೆ ಮೆಡಿಕಲ್ ಕಾಲೇಜ್​ ಮಂಜೂರು ಮಾಡಬೇಕು ಜೊತೆಗೆ ಭೂಮಿಪೂಜೆ ಮಾಡುವುದಕ್ಕೆ ಸಮಯ ಕೊಡಬೇಕು, ಇದೇ ವೇಳೆ, ಕಾಲೇಜು ಸ್ಥಾಪನೆಗೆ ಮರು ಆದೇಶ ನೀಡದಿದ್ದರೆ ನನ್ನದೇ ಹಾದಿಯಲ್ಲಿ ಗಂಭೀರ ಹೋರಾಟ ಮಾಡುವುದಾಗಿ ಹೇಳಿರುವ ಅವರು ಎಚ್ಚರಿಕೆ ನೀಡಿದ್ದು, ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದುಕೊಂಡಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details