ಕರ್ನಾಟಕ

karnataka

ETV Bharat / state

ಬೇಕಾದ್ರೆ ನನ್ನ ಮಗನನ್ನು ಮನೆಗೆ ಕರೆದೊಯ್ಯಲಿ, ಸರಿಯಾಗಿ ಊಟ ಕೊಟ್ರೆ ಸಾಕು: ಡಿಕೆಶಿ ತಾಯಿ

ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದರ ಬಗ್ಗೆ ಡಿಕೆಶಿ ತಾಯಿ ಗೌರಮ್ಮ ಪ್ರತಿಕ್ರಿಯಿಸಿದ್ದಾರೆ.

DKS Mother Reaction about CBI Ride
ಸಿಬಿಐ ದಾಳಿ ಬಗ್ಗೆ ಡಿಕೆ ಶಿವಕುಮಾರ್​ ತಾಯಿ ಪ್ರತಿಕ್ರಿಯೆ

By

Published : Oct 5, 2020, 9:40 PM IST

ರಾಮನಗರ : ನನ್ನ ಮಗನ ಮೇಲೆ ಅವರಿಗೆ ಪ್ರೀತಿ, ಹಾಗಾಗಿ ಆಗಾಗ್ಗೆ ಕರೆದೊಯ್ಯುತ್ತಾರೆ ಎಂದು ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಕುರಿತು ಮಾತನಾಡಿದ ಅವರು, ನನ್ನ ಮಗನನ್ನ ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ ಅನಿಸುತ್ತೆ. ಅದಕ್ಕಾಗಿಯೇ ಪದೇ ಪದೇ ನನ್ನ ಮಗನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ದಾಳಿ ಮಾಡಿ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಹೋಗಿ ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಸಾಕು ಎಂದರು.

ಡಿಕೆಶಿ ತಾಯಿ ಗೌರಮ್ಮ

ಅಕ್ರಮ ಆಸ್ತಿ ಗಳಿಗೆ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮತ್ತು ಸಹೋದರ ಸಂಸದ ಡಿ.ಕೆ ಸುರೇಶ್​ ನಿವಾಸ ಸೇರಿದ ಒಟ್ಟು 15 ಕಡೆಗಳಲ್ಲಿ ಇಂದು ಸಿಬಿಐ ದಾಳಿ ನಡೆಸಿದೆ.

ABOUT THE AUTHOR

...view details