ರಾಮನಗರ:ನಾನು ಫಿಟ್ ಅಂಡ್ ಫೈನ್ ಆಗಿದ್ದೇನೆ. ಯಾವುದೇ ಕಾರಣಕ್ಕೂ ಕೊರೊನಾ ಟೆಸ್ಟ್ ಮಾಡಿಸಲ್ಲ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ಕೊನೆಗೂ ಟೆಸ್ಟ್ಗೆ ಒಪ್ಪಿಕೊಂಡಿದ್ದಾರೆ. ವೈದ್ಯರ ತಂಡವು ಕನಕಪುರದಲ್ಲಿರುವ ಡಿಕೆಶಿ ಮನೆಗೆ ತೆರಳಿ ಕೊರೊನಾ ಸ್ವಾಬ್ ಸ್ಯಾಂಪಲ್ ಪಡೆದುಕೊಂಡಿದೆ.
ಇತ್ತೀಚಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಡಿಕೆ ಶಿವಕುಮಾರ್ ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಸ್ವಾಬ್ ಸ್ಯಾಂಪಲ್ ನೀಡಿದ್ದಾರೆ. ಕನಕಪುರ ತಾಲೂಕು ವೈದ್ಯರ ತಂಡ ಸ್ವಾಬ್ ಸ್ಯಾಂಪಲ್ ತೆಗೆದುಕೊಂಡಿದೆ.