ಕರ್ನಾಟಕ

karnataka

ETV Bharat / state

ಶವ ಸಂಸ್ಕಾರಕ್ಕೆ ಅಡ್ಡಿ ಖಂಡಿಸಿ ಪ್ರತಿಭಟನೆ - ರಾಮನಗರದಲ್ಲಿ ಪ್ರತಿಭಟನೆ

ದಲಿತ ಸಮುದಾಯದ ಸ್ಮಶಾನದಲ್ಲಿ ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಮುದಾಯ ನೂರಾರು ಸದಸ್ಯರು ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Protest by Dalit community
ಶವ ಸಂಸ್ಕಾರಕ್ಕೆ ಅಡ್ಡಿ: ದಲಿತ ಸಮುದಾಯದವರಿಂದ ಪ್ರತಿಭಟನೆ

By

Published : Sep 23, 2020, 8:45 AM IST

ರಾಮನಗರ: ನೂರಾರು ವರ್ಷಗಳಿಂದ ಶವ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದ ದಲಿತ ಸಮುದಾಯದ ಸ್ಮಶಾನದಲ್ಲಿ ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ತಾಲೂಕಿನ ದೇವರಹೊಸಹಳ್ಳಿ ದಲಿತ ಸಮುದಾಯದವರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ದಂಡಾಧಿಕಾರಿ ನಾಗೇಶ್

ಚನ್ನಪಟ್ಟಣ ತಾಲೂಕಿನ ದೇವರಹೊಸಳ್ಳಿ ಗ್ರಾಮದಲ್ಲಿ ಒಂದು ಎಕರೆ 19 ಗುಂಟೆ ಜಮೀನು ದಲಿತ ಸಮುದಾಯಕ್ಕೆ ಸ್ಮಶಾನ ಮೀಸಲಿರಿಸಿದ್ದು, ನೂರಾರು ವರ್ಷಗಳಿಂದ ಶವ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದರು. ಮಂಗಳವಾರ ಸಮುದಾಯದ ವ್ಯಕ್ತಿ ಪುಟ್ಟರಾಮಯ್ಯ (72) ಎಂಬುವವರು ಮೃತಪಟ್ಟಿದ್ದು, ಶವ ಸಂಸ್ಕಾರ ನಡೆಸಲು ಹೋದಾಗ ಗ್ರಾಮದ ಸಿದ್ದಲಿಂಗೇಗೌಡ ಎಂಬುವರು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ತಕರಾರು ಮಾಡುತ್ತಿದ್ದ ಸ್ಥಳದಲ್ಲಿ ಏಕಾಏಕಿ ವಿರೋಧ ಎದುರಿಸಿದ ಸಮುದಾಯದ ನೂರಾರು ಸದಸ್ಯರು ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ದಂಡಾಧಿಕಾರಿಯ ಮೊರೆ ಹೋದರು.

ಸ್ಥಳಕ್ಕೆ ದಂಡಾಧಿಕಾರಿ ನಾಗೇಶ್ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗೆ ಸ್ಪಂದಿಸಿದರು. ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಸಿದ್ದಲಿಂಗೇಗೌಡನ ಬಳಿ ಸಂಬಂಧಿಸಿದ ಸ್ಥಳದ ದಾಖಲೆಗಳನ್ನು ಪರಿಶೀಲಿಸಿ ಈ ಸ್ಥಳ ನಿಮಗೆ ಯಾವ ರೀತಿ ಬಂದಿದೆ ಎಂದು ಪ್ರಶ್ನೆ ಮಾಡಿದಾಗ, ಅದರ ಯಾವುದೇ ದಾಖಲೆಗಳಿಲ್ಲದೆ ಕೈ ಚೆಲ್ಲಿದ್ದಾರೆ. ದಲಿತ ಸಮುದಾಯ ಶವ ಸಂಸ್ಕಾರ ನಡೆಸುತ್ತಿರುವ ಸ್ಥಳ ಸರ್ಕಾರಿ ಜಾಗವಾಗಿದೆ. ಆದರೆ ಇವರು ಈ ಸ್ಥಳಕ್ಕೆ ಯಾವ ರೀತಿ ದಾಖಲೆ ಸೃಷ್ಟಿ ಮಾಡಿಸಿಕೊಂಡಿದ್ದಾರೆಂದು ತರಾಟೆಗೆ ತೆಗೆದುಕೊಂಡ ದಂಡಾಧಿಕಾರಿ, ಮೃತ ಪುಟ್ಟರಾಮಯ್ಯನವರ ಶವ ಸಂಸ್ಕಾರ ನಡೆಸಲು ಅನುವು ಮಾಡಿಕೊಟ್ಟರು.

ಈ ಸ್ಥಳ ಸರ್ಕಾರಿ ಜಾಗವಾಗಿದ್ದು, ಎರಡು ಸಮುದಾಯಕ್ಕೂ ಸೇರಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮುದಾಯಗಳಿಗೆ ಯಾವುದೇ ತಾರತಮ್ಯವಿಲ್ಲದೆ ಇತ್ಯರ್ಥ ಮಾಡುವುದಾಗಿ ತಿಳಿಸಿದರು. ಅನವಶ್ಯಕವಾಗಿ ಸಮುದಾಯಗಳ ನಡುವೆ ಈ ರೀತಿಯ ವಿಚಾರಗಳಿಗೆ ಗಲಾಟೆ ಮಾಡಿಕೊಳ್ಳಬಾರದು. ಯಾವುದೇ ಸಮಸ್ಯೆಯನ್ನು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಂತರ ಕ್ರಮ ಕೈಗೊಳ್ಳಬೇಕು. ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.

ABOUT THE AUTHOR

...view details