ರಾಮನಗರ: ಕನಕಪುರದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಕೀಲರು ಹೇಳಿದ ಬಳಿಕ ನಾನು ಠಾಣೆಗೆ ಹೋಗಿ ದೂರು ವಾಪಸ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಐದು ಪುಟಗಳಲ್ಲಿ ದೂರು ವಾಪಸ್ ಪಡೆಯಲು ಹಲವಾರು ಕಾರಣಗಳನ್ನು ನೀಡಿದ್ದೇನೆ. ವಿಚಾರಣೆಗೆ ಕರೆದರೆ ಮತ್ತೆ ಠಾಣೆಗೆ ಕಾನೂನಾತ್ಮಕವಾಗಿ ಹೋಗುತ್ತೇನೆ. ಸುಮೊಟೊ ಕೇಸ್ ದಾಖಲು ವಿಚಾರ ತನಿಖಾಧಿಕಾರಿಗೆ ಬಿಟ್ಟಿದ್ದು. ಯಾವುದೇ ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ನನಗಿಲ್ಲ. ನಾನು ಯಾವುದೇ ಒತ್ತಡಗಳಿಗೆ ಮಣಿದಿಲ್ಲ ಎಂದರು.
ದೂರು ವಾಪಸ್ ಪಡೆದ ಬಳಿಕ ದಿನೇಶ್ ಕಲ್ಲಹಳ್ಳಿ ಮೊದಲ ಪ್ರತಿಕ್ರಿಯೆ ಮಾನಸಿಕವಾಗಿ ಹಾಗೂ ಹಲವು ಮಾಧ್ಯಮಗಳಲ್ಲಿ ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ಗುರುತರ ಆರೋಪಗಳಿಂದ ನಾನು ಮೊದಲು ಮುಕ್ತನಾಗಬೇಕು. ಹಲವು ಜನ ನನ್ನ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾರಾದರೂ ದಾಖಲೆಗಳನ್ನಿಟ್ಟು ಆರೋಪ ಮಾಡಿದರೆ ನಾನು ಯಾವುದೇ ಹೋರಾಟ ಮಾಡುವುದಿಲ್ಲ. ಕೆಲವರು ತೆವಲಿಗೆ ಮಾತನಾಡ್ತಿದ್ದಾರೆ ಅಷ್ಟೇ, ಮಾತನಾಡೋದು ಸುಲಭ. ಆದರೆ ಮಾತಿನಂತೆ ಹೋರಾಟ ಮಾಡಲು ಕಷ್ಟ ಇದೆ ಎಂದು ಹೇಳಿದರು.
ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳುಹಿಸುವೆ ಎಂಬ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅವರು ಹೋರಾಟ ಮಾಡಲಿ, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಸಿಡಿ ಕುರಿತು ತನಿಖೆಯ ಬಗ್ಗೆ ಸಂಜೆಯೊಳಗೆ ಸ್ಪಷ್ಟ ನಿರ್ಧಾರ : ಸಿಎಂ ಬಿಎಸ್ವೈ