ಕರ್ನಾಟಕ

karnataka

By

Published : Jan 23, 2020, 7:35 PM IST

Updated : Jan 23, 2020, 10:41 PM IST

ETV Bharat / state

ದೇಶದಲ್ಲಿ ಉದ್ಯೋಗ ಸೃಷ್ಟಿ ಹೇಳಿಕೆ ಸಮರ್ಥಿಸಿಕೊಂಡ ಡಿಸಿಎಂ ಅಶ್ವತ್ಥ​ ನಾರಾಯಣ

ರಾಮನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ ಅವರು, ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂಬ ನನ್ನ ಹೇಳಿಕೆಯನ್ನ ನಾನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ ಎಂದಿದ್ದಾರೆ.

DCM Ashwath Narayana
ಡಿಸಿಎಂ ಅಶ್ವಥ್​ ನಾರಾಯಣ

ರಾಮನಗರ: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂಬ ನನ್ನ ಹೇಳಿಕೆಯನ್ನ ನಾನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ. ಕೆಲವರು ಸರಿಯಾಗಿ‌ ಅರ್ಥೈಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ​​ ನಾರಾಯಣ ಡಿ.ಕೆ. ಸುರೇಶ್​​​ಗೆ ಟಾಂಗ್ ನೀಡಿದರು.

ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ಕನ್ನಡ ಕಲಿಕೆಗೆ ಎಲ್ಲ ಅಗತ್ಯತೆಗಳನ್ನು ನೀಡಲಾಗುವುದು‌ ತಂತ್ರಜ್ಞಾನದ ಬಳಕೆಗೆ ಸಾಕಷ್ಟು ಒತ್ತು ನೀಡಲಾಗುವುದು. ಇಂತಹ ಕನ್ನಡ ಕಾರ್ಯಕ್ರಮಗಳು ಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿವೆ. ಕನ್ನಡ ಕೆಲಸ ಮಾಡಲು ಮುಖ್ಯಮಂತ್ರಿಗಳಿಗೆ ವಿಶೇಷ ಆಸಕ್ತಿ ಇದೆ.‌ ಅಲ್ಲದೇ ರಾಜ್ಯ ಹಾಗೂ ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ ಸಿದ್ಧತೆಗಳು ನಡೆದಿವೆ ಎಂದರು.

ಡಿಸಿಎಂ ಅಶ್ವಥ್​ ನಾರಾಯಣ

ನನ್ನ ಹೇಳಿಕೆ ಬಗ್ಗೆ ಮಾತನಾಡುವವರಿಗೆ ಸ್ವಲ್ಪ ಸಮಾಧಾನ ಇರಬೇಕು. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂಬ ಹೇಳಿಕೆಯನ್ನು ಈಗಲು ಸಮರ್ಥಿಸಿಕೊಳ್ಳುತ್ತೇ‌ನೆ. ಇಪಿಎಫ್​​ನಲ್ಲಿ 5,75,000 ಉದ್ಯೋಗ ಸೃಷ್ಟಿಯಾಗಿದೆ. 2019ನೇ ಸಾಲಿನಲ್ಲಿ ಶೇ.106 ರಷ್ಟು ಉದ್ಯೋಗ ನಿರ್ಮಾಣ ಆಗಿದೆ. ಚಿಕ್ಕ ಸಂಘಟನೆಗಳು ಇಪಿಎಫ್ ವ್ಯಾಪ್ತಿಯಲ್ಲಿಲ್ಲ. ಇನ್ನು ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ಇದು ಪೂರಕವಾಗಿದೆ. ಈ ವ್ಯವಸ್ಥೆ ನಿರ್ಮಿಸುವ ಸಲುವಾಗಿಯೇ ಈ ಹೇಳಿಕೆ ನೀಡಿದ್ದೆ. ಜನರ ಕಲ್ಯಾಣಕ್ಕೆ ಹೇಳಿದ್ದೇನೆ ಎಂದರು.

ಜಿಲ್ಲೆಯಲ್ಲಿ ಇನ್ನು ಹೆಚ್ಚಾಗಿ ನಾನು ಭಾಗವಹಿಸಬೇಕು. ಜಿಲ್ಲೆಗೆ ಏನೆಲ್ಲ ಪ್ರಯತ್ನ ಮಾಡುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ. ನಾನು ದೈಹಿಕವಾಗಿ‌ ಕಡಿಮೆ ಕಾಣುತ್ತಿದ್ದರೂ, ಯೋಜನೆಗಳ ಬಗ್ಗೆ ಪ್ಲಾನ್​ ಮಾಡಿದ್ದೇನೆ. ಕೆಡಿಬಿ ಸಭೆ ಬಳಿಕೆ ಹೆಲ್ತ್ ಸಿಟಿ, ಹೆಲ್ತ್ ಟೂರಿಸಂ ಮಾಡಲು ಸಿದ್ಧತೆ ನಡೆದಿದೆ. ರಾಮನಗರವನ್ನು ಆರೋಗ್ಯ ತಾಣ ನಿರ್ಮಾಣಕ್ಕೆ‌ ಸಜ್ಜಾಗಿದ್ದೇನೆ. ಆರೋಗ್ಯ ವಿವಿಗೆ ರೆಡಿ‌ ಇದ್ದೇನೆ. ಇನ್ಸ್ ಟ್ಯೂಟ್ ಆಪ್ ನ್ಯಾಷನಲ್ ಇಂಪರಟೆನ್ಸ್ (ನೈಪರ್) ಅನ್ನು ಮಾಗಡಿಯಲ್ಲಿ ಸ್ಥಾಪಿಸಲಾಗುವುದು. ಇನ್ನು ಕೆಲವೇ ದಿನ ಎಲ್ಲದರ ಫಲಿತಾಂಶ ಬರಲಿದೆ ಎಂದರು.

ನಮ್ಮ ಸರ್ಕಾರದಲ್ಲಿ ಯಾವುದೇ ಯೋಜನೆಗೆ ಕಡಿವಾಣ ಹಾಕಿಲ್ಲ. ಬೇರೆಯವರ ಸರ್ಕಾರದಲ್ಲಿ‌ ಟಾರ್ಗೇಟ್ ಇರಬೇಕು. ನಮ್ಮಲ್ಲಿ ಅಂತಹುದು ಯಾವುದೂ ಇಲ್ಲ. ಕೆಂಪೇಗೌಡ ಅಭಿವೃದ್ಧಿ ತಾಣದಲ್ಲಿ ಸಾಕಷ್ಟು ಕೆಲಸ ಆಗಲಿದೆ. ಭಾವನಾತ್ಮಕವಾಗಿ ಕೆಲಸ ಮಾಡಲಾಗುವುದು ಎಂದರು.

Last Updated : Jan 23, 2020, 10:41 PM IST

ABOUT THE AUTHOR

...view details