ರಾಮನಗರ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕೊರೊನಾ ವಿರುದ್ಧ ರಕ್ಷಣಾ ಸಾಮಗ್ರಿಗಳನ್ನು ಸಾಂಕೇತಿಕವಾಗಿ ಉಪಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ವಿತರಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೊನಾ ರಕ್ಷಣಾ ಸಾಮಗ್ರಿ ವಿತರಿಸಿದ ಡಿಸಿಎಂ - DCM distributes Corona
ಇಂದು ಹೊಸ ಜಿಲ್ಲಾಸ್ಪತ್ರೆಯ ಕಾಮಗಾರಿಯ ಪರಿಶೀಲನೆ ವೇಳೆ ರಕ್ಷಣಾ ಸಾಮಗ್ರಿಗಳನ್ನು ವಿತರಿಸಿದರು. ಜಿಲ್ಲೆಯಲ್ಲಿ 1,543 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 1,301 ಮುಖ್ಯ ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ ಒಬ್ಬರು ಕಾರ್ಯಕರ್ತೆ ಮತ್ತು ಒಬ್ಬ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. 242 ಮಿನಿ ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ ಒಬ್ಬರು ಅಂಗನವಾಡಿ ಕಾರ್ಯಕರ್ತೆ ಮಾತ್ರ ಕೆಲಸ ನಿರ್ವಹಿಸುತ್ತಿದ್ದು. ಇವರುಗಳಿಗೆ ಸ್ಯಾನಿಟೈಸರ್, ಎನ್ 95 ಮಾಸ್ಕ್, ಫೇಸ್ ಶೀಲ್ಡ್, ಮತ್ತು ಹ್ಯಾಂಡ್ ಗ್ಲೌಸ್ಗಳನ್ನು ಡಿಸಿಎಂ ವಿತರಿಸಿದರು.
ಇಂದು ಹೊಸ ಜಿಲ್ಲಾಸ್ಪತ್ರೆಯ ಕಾಮಗಾರಿಯ ಪರಿಶೀಲನೆ ವೇಳೆ ರಕ್ಷಣಾ ಸಾಮಗ್ರಿಗಳನ್ನು ವಿತರಿಸಿದರು. ಜಿಲ್ಲೆಯಲ್ಲಿ 1,543 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 1,301 ಮುಖ್ಯ ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ ಒಬ್ಬರು ಕಾರ್ಯಕರ್ತೆ ಮತ್ತು ಒಬ್ಬ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. 242 ಮಿನಿ ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ ಒಬ್ಬರು ಅಂಗನವಾಡಿ ಕಾರ್ಯಕರ್ತೆ ಮಾತ್ರ ಕೆಲಸ ನಿರ್ವಹಿಸುತ್ತಿದ್ದು. ಇವರುಗಳಿಗೆ ಸ್ಯಾನಿಟೈಸರ್, ಎನ್ 95 ಮಾಸ್ಕ್, ಫೇಸ್ ಶೀಲ್ಡ್, ಮತ್ತು ಹ್ಯಾಂಡ್ ಗ್ಲೌಸ್ಗಳನ್ನು ವಿತರಿಸಿದರು.
ಪ್ರತಿ ಅಂಗನವಾಡಿ ಕೇಂದ್ರಕ್ಕೆ 500 ಎಂಎಲ್ ನಂತೆ ಒಟ್ಟು 7,715 ಸ್ಯಾನಿಟೈಸರ್ ಬಾಟಲ್, ಪ್ರತಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ 2 ರಂತೆ 5,688 ಎನ್ 95 ಮಾಸ್ಕ್, ತಲಾ 20 ರಂತೆ 42,660 ಸರ್ಜಿಕಲ್ ಮಾಸ್ಕ್, ತಲಾ 1 ರಂತೆ 2,844 ಸೇಫ್ ಶೀಲ್ಡ್ ಹಾಗೂ 1 ಜೊತೆಯಂತೆ 2,844 ಗ್ಲೌಸ್ಗಳನ್ನು ಜಿಲ್ಲೆಯಲ್ಲಿ ವಿತರಿಸಲಾಗಿದೆ.