ಕರ್ನಾಟಕ

karnataka

ETV Bharat / state

ಮುಂದಿನ 4 ತಿಂಗಳವರೆಗೂ ಲಾಕ್​ಡೌನ್​ ಮುಂದುವರೆಯುವ ಸೂಚನೆ ನೀಡಿದ ಡಿಸಿಎಂ.. - DCM Ashwath Narayan

ರಾಮನಗರ ಜಿಲ್ಲೆಗೆ ಭೇಟಿ ನೀಡಿದ ಡಿಸಿಎಂ, ಜಿಲ್ಲಾಸ್ಪತ್ರೆಯಲ್ಲಿನ 100 ಬೆಡ್‌ನ ಕೋವಿಡ್ ಮೀಸಲು ಕೊಠಡಿ ವೀಕ್ಷಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ರು.

DCM Ashwathth given the indications that the lockdown will continue for the next 4 months
ಮುಂದಿನ 4 ತಿಂಗಳವರೆಗೂ ಲಾಕ್​ಡೌನ್​ ಮುಂದುವರೆಯುವ ಸೂಚನರ ನೀಡಿದ ಡಿಸಿಎಂ ಅಶ್ವತ್ಥ್​

By

Published : Apr 5, 2020, 10:59 AM IST

ರಾಮನಗರ :ಲಾಕ್‌ಡೌನ್ ಏಪ್ರಿಲ್‌ 14ರವರೆಗೆ ಮಾತ್ರ ಇರೋದಿಲ್ಲ ಮುಂದಿನ 4 ತಿಂಗಳ ಕಾಲ ಇದೇ ಎಚ್ಚರಿಕೆ ಅತ್ಯಗತ್ಯ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ಹೇಳಿದ್ದಾರೆ.

ಮುಂದಿನ 4 ತಿಂಗಳು ಲಾಕ್​ಡೌನ್​ ಮುಂದುವರೆಯುವ ಸುಳಿವು ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ..​

ರಾಮನಗರ ಜಿಲ್ಲೆಗೆ ಭೇಟಿ ನೀಡಿದ ಡಿಸಿಎಂ, ಜಿಲ್ಲಾಸ್ಪತ್ರೆಯಲ್ಲಿನ 100 ಬೆಡ್‌ನ ಕೋವಿಡ್ ಮೀಸಲು ಕೊಠಡಿಯನ್ನು ವೀಕ್ಷಣೆ ಮಾಡಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ, ಎಸ್​ಪಿ ಅನೂಪ್ ಎ ಶೆಟ್ಟಿ, ಡಿಹೆಚ್ಒ ಡಾ. ನಿರಂಜನ್ ಸಭೆಯಲ್ಲಿ ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಅಶ್ವತ್ಥ್‌ ನಾರಾಯಣ್, ರಾಮನಗರದ ರೇಷ್ಮೆ ಮಾರ್ಕೆಟ್‌ನ 4 ಕಡೆಗಳಲ್ಲಿ ವಿಂಗಡನೆ ಮಾಡುವ ಯೋಚನೆ ಇದೆ. ವೈರಸ್‌ ತಡೆಗಾಗಿ ಈ ಕ್ರಮದ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗ್ತಿದೆ ಎಂದು ಹೇಳಿದ್ರು. ಇದೇ ವೇಳೆ ಮುಂದಿನ 4 ತಿಂಗಳಿಗೆ ಮರುಬಳಕೆ ಮಾಡುವ ಮಾಸ್ಕ್ ತಯಾರಿಕೆಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ರು.

ರಾಮನಗರದಲ್ಲಿ ರೇಷ್ಮೆ ಮಾರ್ಕೆಟ್ ಒಪನ್ ವಿಚಾರವಾಗಿ ಡಿ ಕೆ ಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿಯವರು ಸರ್ವಪಕ್ಷ ಸಭೆಯಲ್ಲಿ ಸಿಎಂಗೆ ಒತ್ತಾಯ ಮಾಡಿದ್ರು ಅಂತಾ ಹೇಳಿದ್ರು. ಮುಂದಿನ ದಿನಗಳಲ್ಲಿ ರೈಸ್ ಮಿಲ್‌ಗಳು ಒಪನ್ ಆಗ್ತವೆ. ಜೊತೆಗೆ ವೈನ್ ಫ್ಯಾಕ್ಟರಿಗಳು ಸಹ ಪ್ರಾರಂಭ ಆಗ್ತವೆ ಎನ್ನುವ ಮೂಲಕ ಮದ್ಯಪ್ರಿಯರಿಗೆ ಡಿಸಿಎಂ ಡಾ. ಅಶ್ವತ್ಥ್‌ ನಾರಾಯಣ್ ಮುನ್ಸೂಚನೆ ನೀಡಿದರು.

ABOUT THE AUTHOR

...view details