ರಾಮನಗರ:ಇಲ್ಲಿನ ಕೊರೊನಾ ಚಿಕಿತ್ಸೆಗೆ ಮೀಸಲಿರಿಸಿರುವ ಆಸ್ಪತ್ರೆಯಲ್ಲಿ ಉಪಮುಖ್ಯಮಂತ್ರಿ ಆಶ್ವತ್ಥ ನಾರಾಯಣ ಐಸಿಯು ಘಟಕಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರಾಮನಗರಕ್ಕೆ ಅಗತ್ಯವಾಗಿ ಬೇಕಾಗಿದ್ದ 16 ಬೆಡ್ನ ರಿಮೋಟ್ ಐಸಿಯು ಘಟಕ ತೆರೆಯಲಾಗಿದೆ ಎಂದರು.
ರಾಜ್ಯದ 1ಲಕ್ಷ ಜನರು ಹೊರ ರಾಜ್ಯದಲ್ಲಿದ್ದು, ಅಂಥವರನ್ನು ಕರೆಸಿಕೊಳ್ಳಲಾಗುತ್ತಿದೆ. ಹೀಗೆ ರಾಜ್ಯಕ್ಕೆ ಬಂದವರನ್ನು 14 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ. ಪಾದರಾಯನಪುರ ಸೋಂಕಿತರ ಕರೆತರುವಲ್ಲಿ ಕೆಲವು ಸಮಸ್ಯೆಗಳಾಗಿದ್ದವು. ಅವರ ರಿಪೋರ್ಟ್ ಬಂದ ಮೇಲೆ ಇಲ್ಲಿಗೆ ಕರೆತರಬೇಕಾಗಿತ್ತು ಎಂದಿದ್ದಾರೆ.