ಕರ್ನಾಟಕ

karnataka

ETV Bharat / state

ಯಾವುದೇ ಲೋಪವಿಲ್ಲದೆ ಕೋವಿಡ್ ಕೆಲಸ ಮಾಡಬೇಕು: ಅಶ್ವತ್ಥ ನಾರಾಯಣ

ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಣೆಯಾಗಬೇಕು‌. ಕೋವಿಡ್ ಕೇರ್ ಸೆಂಟರ್​ಗೆ ಮಹಿಳೆಯರು ಬರಲು ಹಿಂದೇಟು ಹಾಕುತ್ತಾರೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಅಶ್ವತ್ಥ್ ನಾರಾಯಣ
ಅಶ್ವತ್ಥ್ ನಾರಾಯಣ

By

Published : May 19, 2021, 9:05 AM IST

ರಾಮನಗರ:ನಮ್ಮ ಗ್ರಾಮ ಕೋವಿಡ್ ಮುಕ್ತವಾಗಬೇಕು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಮನೋಭಾವ ಮೂಡಿಸುವ ರೀತಿ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಆಡಳಿತ ಕೈ ಜೋಡಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಮನೆ ಮನೆ ಸರ್ವೆ ನಡೆಸಿ ಸೋಂಕಿತರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಎಂದರು. ಜಿಲ್ಲೆಯಲ್ಲಿ ಹೋಮ್ ಐಸೊಲೇಷನ್ ನಿಲುಗಡೆ ಮಾಡಿ ಎಲ್ಲರಿಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತದೆ. ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಣೆಯಾಗಬೇಕು‌. ಕೋವಿಡ್ ಕೇರ್ ಸೆಂಟರ್​ಗೆ ಮಹಿಳೆಯರು ಬರಲು ಹಿಂದೇಟು ಹಾಕುತ್ತಾರೆ. ಅವರಿಗೂ ಸಹ ಸೂಕ್ತ ವ್ಯವಸ್ಥೆ ಇದೆ ಎಂಬ ಮನೋಭಾವ ಅವರಲ್ಲಿ ಮೂಡಬೇಕು ಎಂದರು.

ಪ್ರತಿ ದಿನ ಉತ್ಸಾಹದಿಂದ ಕೆಲಸ ಮಾಡಿ:

ಕೋವಿಡ್ ಸೋಂಕು ಹೋಗಲಾಡಿಸಲು ಕಾರ್ಯನಿರ್ವಹಿಸುವ ಅಧಿಕಾರಿಗಳು ಮೈ ಮರೆಯುವಂತಿಲ್ಲ. ಕೋವಿಡ್ ಲಸಿಕೆ ನೀಡುವ ಕೆಲಸ ಸಂಪೂರ್ಣವಾಗಿ ಮುಗಿಯುವವರೆಗೆ ಪ್ರತಿದಿನ ಉತ್ಸಾಹದಿಂದ ಕಾರ್ಯನಿರ್ವಹಿಸಬೇಕು ಎಂದರು.

ಮುಂದಿನ ದಿನಕ್ಕೂ ಸಿದ್ಧತೆ:

ಮೂರನೇ ಅಲೆ ಕೋವಿಡ್ ಚಿಕಿತ್ಸೆಗೆ ಬೇಕಿರುವ ಸಿದ್ಧತೆ ಮಾಡಿಕೊಳ್ಳಬೇಕಿದ್ದು, ಜಿಲ್ಲಾಸ್ಪತ್ರೆಯಲ್ಲಿ 150, ತಾಲೂಕು ಆಸ್ಪತ್ರೆಯಲ್ಲಿ 25 ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 10 ಆಕ್ಸಿಜನೇಟೆಡ್ ಐಸಿಯು ಬೆಡ್​ಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಿರುತ್ತದೆ. ಬ್ಲಾಕ್ ಫಂಗಸ್​ಗೆ ಸಂಬಂಧಿಸಿದಂತೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಜಿಲ್ಲೆಯಲ್ಲಿ ಬ್ಲಾಕ್‌ ಫಂಗಸ್ ಸೋಂಕಿತರು ವರದಿಯಾದಲ್ಲಿ ಚಿಕಿತ್ಸೆ ಕೊಡಿಸಿ ಎಂದರು.

ಇದನ್ನೂ ಓದಿ:ಮಾನಸಿಕ ಅಸ್ವಸ್ಥ ವಿದೇಶಿ ಪ್ರಜೆಯನ್ನು ತವರು ಸೇರಿಸಿದ ಬೆಂಗಳೂರು ಪೊಲೀಸರು

ABOUT THE AUTHOR

...view details