ರಾಮನಗರ:ಪೊಲೀಸರ ಭದ್ರತಾ ವೈಫಲ್ಯದಿಂದಲೇ ಸೋಮವಾರ ಸಿಎಂ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿದೆ. ಸಿಎಂ ಇರುವ ವೇದಿಕೆಗೆ ಸಂಘಟನಾಕಾರರು ಯಾವ ರೀತಿ ಬಂದ್ರು. ಯಾರು ಅವರನ್ನ ವೇದಿಕೆಗೆ ಬಿಟ್ಟರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಸಿಎಂ ಕಾರ್ಯಕ್ರಮದಲ್ಲಿ ಗೊಂದಲ ವಾತಾವರಣ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಸಿಎಂ ಹಾಗು ಸಚಿವರು ಇರುವ ವೇದಿಕೆಗೆ ಸಂಘಟನಾಕಾರರನ್ನ ಬಿಟ್ಟವರು ಯಾರು? ಎಂಬುದರ ಬಗ್ಗೆ ಕಾರ್ಯಕ್ರಮದ ವಿಡಿಯೋ ತುಣುಕು ಗಮನಿಸಲಾಗುತ್ತಿದೆ. ಯಾರೇ ತಪ್ಪು ಮಾಡಿದ್ರು ಶಿಕ್ಷಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿದರು ಜಿಲ್ಲಾಡಳಿತದಿಂದ ಯಾವುದೇ ವೈಫಲ್ಯ ನಡೆದಿಲ್ಲ. ಕಾರ್ಯಕ್ರಮಕ್ಕೂ ಮುನ್ನ ಕೆಲವು ಸಣ್ಣ ಪುಟ್ಟ ಇದ್ದ ಸಮಸ್ಯೆಗಳನ್ನ ಸಂಘಟನೆ ಮುಖಂಡರ ಜೊತೆ ಚರ್ಚಿಸಿ ಬಗೆಹರಿಸಲಾಗಿತ್ತು. ಕಡಿಮೆ ಅವಧಿ ಇದ್ದ ಕಾರಣ ಜನಪ್ರತಿನಿಧಿಗಳ ಸಭೆ ನಡೆಸಲು ಆಗಲಿಲ್ಲ. ನಾನೇ ಸ್ವತಃ ಸಂಸದರಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿದ್ದೆ. ಸಮಯ ಕಡಿಮೆ ಇದ್ದುದರಿಂದ ಸಭೆ ನಡೆಸಲು ಆಗಿರಲಿಲ್ಲ. ಎಲ್ಲಾ ಜನಪ್ರತಿನಿಧಿಗಳಿಗೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ತಲುಪಿತ್ತು.
ಸದ್ಯ ಮೇಲ್ನೋಟಕ್ಕೆ ಬಂದೋಬಸ್ತ್ ವೈಫಲ್ಯ ಕಾಣುತ್ತಿದ್ದು, ಎರಡು ಮೂರು ದಿನಗಳಲ್ಲಿ ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಓದಿ:VIDEO: ಸಿಎಂ ಎದುರೇ ಸಚಿವ ಅಶ್ವತ್ಥ ನಾರಾಯಣ - ಸಂಸದ ಡಿಕೆ ಸುರೇಶ್ ಜಟಾಪಟಿ..ವೇದಿಕೆಯಲ್ಲೇ ಬೆಂಬಲಿಗರ ಬಿಗ್ ಫೈಟ್!