ರಾಮನಗರ:ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಯ ಒಟ್ಟು 62 ವಾರ್ಡ್ಗಳಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ. ತಿಳಿಸಿದರು.
ಅವರು ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 30ರ ಚುನಾವಣೆ ನಡೆಯುವ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಸದರಿ ಚುನಾವಣೆಯ ಮತದಾನವು ಇದೆ 27 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ. ಅದರನ್ವಯ ಚುನಾವಣೆ ನಡೆಸಲು ಜಿಲ್ಲಾಡಳಿತವು ಸಂಪೂರ್ಣವಾಗಿ ಸಜ್ಜಾಗಿರುತ್ತದೆ ಎಂದರು.
ರಾಮನಗರ ನಗರಸಭೆಯ 31 ವಾರ್ಡ್ಗಳ ಚುನಾವಣೆಗೆ 4 ಚುನಾವಣಾ ಅಧಿಕಾರಿ ಮತ್ತು 4 ಸಹಾಯಕ ಚುನಾವಣಾ ಅಧಿಕಾರಿಗಳು ನೇಮಿಸಲಾಗಿದೆ. ಮತದಾನದ ದಿನಕ್ಕೆ 83 ಪಿ.ಆರ್.ಒ, 83 ಎ.ಪಿ.ಆರ್.ಒ, 166 ಪಿಒ ಸೇರಿದಂತೆ ಒಟ್ಟು 332 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.
ರಾಮನಗರ ನಗರ ಸಭೆಯ 31 ವಾರ್ಡ್ಗಳಿಂದ ಒಟ್ಟು 145 ನಾಮ ಪಾತ್ರಗಳು ಸ್ವೀಕೃತ ವಾಗಿದ್ದು. 12 ತಿರಸ್ಕತ ಕೊಂಡು 133 ನಾಮ ಪತ್ರ ಗಳು ಕ್ರಮ ಬದ್ಧವಾಗಿ ನಾಮ ನಿದೇಶಿತವಾಗಿರುತ್ತದೆ ಎಂದರು.
ರಾಮನಗರ ನಗರಸಭೆಗೆ ಸಂಬಂಧಿಸಿದಂತೆ 72 ಮತಗಟ್ಟೆಗಳು ಹಾಗೂ ಹೆಚ್ಚುವರಿ 4 ಮತಗಟ್ಟೆಗಳು ಸೇರಿದಂತೆ ಒಟ್ಟು 76 ಮತಗಟ್ಟೆಗಳನ್ನು ತೆರೆಯಲಾಗುವುದು. ರಾಮನಗರ ನಗರ ಸಭೆ ಚುನಾವಣೆಯಲ್ಲಿ 38,738 ಪುರಷರು, 40780 ಮಹಿಳೆಯರು ಮತ್ತು ಇತರೆ 12 ಸೇರಿದಂತೆ ಒಟ್ಟು 79,530 ಮತದರರಿದ್ದಾರೆ ಎಂದು ಮಾಹಿತಿ ನೀಡಿದರು.
ರಾಮನಗರ ನಗರಸಭೆಯ ಚುನಾವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಮತ ಎಣೆಕೆ ಕಾರ್ಯವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದರು.