ರಾಮನಗರ :ಪ್ರಧಾನಿ ಮೋದಿಗೆ ತಾಕತ್ತಿದ್ರೆ ಚೀನಾ ವಸ್ತುಗಳನ್ನ ಬ್ಯಾನ್ ಮಾಡಲಿ ಎಂದು ಸಂಸದ ಡಿ ಕೆ ಸುರೇಶ್ ಬಹಿರಂಗವಾಗಿಯೇ ಸವಾಲು ಹಾಕಿದರು.
ತಾಕತ್ತಿದ್ರೆ ಚೀನಾ ವಸ್ತುಗಳನ್ನ ಬ್ಯಾನ್ ಮಾಡಲಿ.. ಮೋದಿಗೆ ಸಂಸದ ಡಿ ಕೆ ಸುರೇಶ್ ಸವಾಲು - Modi
ಮೋದಿ ದೇಶಗಳನ್ನ ಸುತ್ತಿ ನೆರೆ ರಾಷ್ಟ್ರಗಳ ಜೊತೆಗಿನ ಬಾಂಧವ್ಯ ಕೆಡಿಸಿಕೊಂಡಿದ್ದಾರೆ. ಚೀನಾ ಪ್ರಾಡಕ್ಟ್‌ಗಳನ್ನ ಬ್ಯಾನ್ ಮಾಡೋದ್ರಲ್ಲಿ ನಮ್ಮ ತಕರಾರು ಏನಿಲ್ಲ..
ನಗರದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಮಾತನಾಡಿದ ಅವರು, ದೇಶದಲ್ಲಿ ಅವರದ್ದೇ ಸರ್ಕಾರವಿದೆ. ಈ ಕೂಡಲೇ ಚೀನಾ ವಸ್ತುಗಳನ್ನ ಬ್ಯಾನ್ ಮಾಡಲಿ. ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರು ಈ ವಿಚಾರದಲ್ಲಿ ಬೆಂಬಲ ನೀಡಿದ್ದಾರೆ. ನೋಟ್ ಬ್ಯಾನ್ ವಿಚಾರ, ಲಾಕ್ಡೌನ್ ವಿಚಾರದಲ್ಲಿ ದಿಟ್ಟತನ ತೋರಿದ ಮೋದಿ ಚೀನಾ ವಸ್ತುಗಳನ್ನ ಏಕೆ ಬ್ಯಾನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳ ವಿರೋಧದ ನಡುವೆಯು ನೋಟ್ಬ್ಯಾನ್, ಲಾಕ್ಡೌನ್ ಮಾಡಿದ್ದರು. ಅಲ್ಲದೆ 70 ವರ್ಷದ ಸ್ನೇಹಿತ ರಷ್ಯಾ ದೇಶವನ್ನ ಕಡೆಗಣಿಸಿ ಇದೀಗ ರಷ್ಯಾ ಜತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಮೋದಿ ದೇಶಗಳನ್ನ ಸುತ್ತಿ ನೆರೆ ರಾಷ್ಟ್ರಗಳ ಜೊತೆಗಿನ ಬಾಂಧವ್ಯ ಕೆಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಡಿ ಕೆ ಸುರೇಶ್, ಚೀನಾ ಪ್ರಾಡಕ್ಟ್‌ಗಳನ್ನ ಬ್ಯಾನ್ ಮಾಡೋದ್ರಲ್ಲಿ ನಮ್ಮ ತಕರಾರು ಏನಿಲ್ಲ ಎಂದರು.