ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಹೋಟೆಲ್ ಗಳಿಗೆ ಅವಕಾಶ ನೀಡಿ: ಸಿಎಂ ಗೆ ಡಿ. ಕೆ. ಸುರೇಶ್ ಮನವಿ - ರಾಮನಗರ ಲಾಕ್​ಡೌನ್​

ರಾಮನಗರ ಜಿಲ್ಲೆ ಹಸಿರು ವಲಯವನ್ನಾಗಿ ಘೋಷಿಸಿದ್ದು, ದಯವಿಟ್ಟು ಇಲ್ಲಿ ಹೋಟೆಲ್​ ಸೇವೆಗಳಿಗೆ ಅನುವು ಮಾಡಿಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ವಿಡಿಯೋ ಮೂಲಕ ಮುಖ್ಯಮಂತ್ರಿಗಳನ್ನು ವಿನಂತಿಸಿಕೊಂಡಿದ್ದಾರೆ.

D. K. Suresh appeals CM to permit hotel service in Ramanagar
ರಾಮನಗರದಲ್ಲಿ ಹೋಟೆಲ್ ಗಳಿಗೆ ಅವಕಾಶ ನೀಡಿ: ಸಿಎಂ ಗೆ ಡಿ. ಕೆ. ಸುರೇಶ್ ಮನವಿ

By

Published : May 6, 2020, 7:41 AM IST

ಬೆಂಗಳೂರು: ರಾಮನಗರ ಕೋವಿಡ್ ಮುಕ್ತ ಜಿಲ್ಲೆಯಾಗಿದ್ದು, ಈ ಪ್ರದೇಶದಲ್ಲಿ ಹೋಟೆಲ್ ಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ರಾಮನಗರದಲ್ಲಿ ಹೋಟೆಲ್ ಗಳಿಗೆ ಅವಕಾಶ ನೀಡಿ: ಸಿಎಂ ಗೆ ಡಿ. ಕೆ. ಸುರೇಶ್ ಮನವಿ

ಮಂಗಳವಾರ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಸಂಸದರು, ಮುಖ್ಯಮಂತ್ರಿಗಳೇ ರಾಮನಗರ ಜಿಲ್ಲೆಯನ್ನು ನೀವು ಹಸಿರು ವಲಯವನ್ನಾಗಿ ಘೋಷಿಸಿದ್ದೀರಿ. ಆದರೂ ಜಿಲ್ಲೆಯಲ್ಲಿ ಈವರೆಗೂ ಹೋಟೆಲ್ ಗಳಿಂದ ತಿಂಡಿಯನ್ನು ಪಾರ್ಸೆಲ್​ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿಲ್ಲ. ಈ ವಿಚಾರವಾಗಿ ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರೂ ಅವಕಾಶ ದೊರಕುತ್ತಿಲ್ಲ. ಇದರಿಂದ ಹಳ್ಳಿಗಳಿಂದ ಪಟ್ಟಣಕ್ಕೆ ಬಂದ ಜನರಿಗೆ ತಿನ್ನಲು ಏನು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಸಿಎಂ ಅವರೇ ತಾವು ಮುಖ್ಯ ಕಾರ್ಯದರ್ಶಿದರ್ಶಿಗಳಿಗೆ ಆದೇಶ ನೀಡಿ ನನ್ನ ಕ್ಷೇತ್ರ ರಾಮನಗರ ಹಾಗೂ ತುಮಕೂರು ಭಾಗಳಲ್ಲಿ ಹೋಟೆಲ್​ ಸೇವೆಗಳು ನಡೆಯುವಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ನಾನು ನಿಮಗೆ ವಿನಂತಿ ಮಾಡುತ್ತೇನೆ ಎಂದು ಕೋರಿದ್ದಾರೆ.

ABOUT THE AUTHOR

...view details