ಕರ್ನಾಟಕ

karnataka

ETV Bharat / state

'ಬಿಜೆಪಿಯಿಂದ ಅಧಿಕಾರಿಗಳ ದುರ್ಬಳಕೆ, ಐಟಿ ಮೂಲಕ ಚಂದಾ ವಸೂಲಿ' - ಐಟಿ ಅಧಿಕಾರಿ

ಬಿಜೆಪಿಯಿಂದ ಐಟಿ ಇಲಾಖೆ ದುರ್ಬಳಕೆ, ಚುನಾವಣೆಗೆ ಚಂದಾ ವಸೂಲಿ- ಐಟಿ ಅಧಿಕಾರಿ‌ ಮನೆಯಲ್ಲಿ ೧.೫ ಕೋಟಿ‌ ಹಣ ಸಿಕ್ಕಿರೋದೇ ಇದಕ್ಕೆ ಸಾಕ್ಷಿ- ಮೈತ್ರಿ ಅಭ್ಯರ್ಥಿ ಡಿ.ಕೆ‌. ಸುರೇಶ್ ಗಂಭೀರ ಆರೋಪ.

ಮೈತ್ರಿ ಅಭ್ಯರ್ಥಿ ಡಿ.ಕೆ‌.ಸುರೇಶ್ ಗಂಭೀರ ಆರೋಪ

By

Published : Apr 5, 2019, 7:59 PM IST

ರಾಮನಗರ: ಬಿಜೆಪಿ ಐಟಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಗೆ ಚಂದಾ ವಸೂಲಿ ಮಾಡುತ್ತಿದೆ ಎಂದು ಮೈತ್ರಿ ಅಭ್ಯರ್ಥಿ ಡಿ.ಕೆ‌. ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಸ್ವಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹೊಂಗನೂರು ಹೋಬಳಿಯಲ್ಲಿ ಪ್ರಚಾರ ನಡೆಸುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಚುನಾವಣೆಯಲ್ಲಿ ಐಟಿ ಇಲಾಖೆ ದುರ್ಬಳಕೆ ಆಗ್ತಿದೆ ಅನ್ನೋದಕ್ಕೆ ಐಟಿ ಅಧಿಕಾರಿ‌ ಮನೆಗಳಲ್ಲಿ ೧.೫ ಕೋಟಿ‌ ಹಣ ಸಿಕ್ಕಿರೋದೆ ಸಾಕ್ಷಿ ಎಂದರು.

ಮೈತ್ರಿ ಅಭ್ಯರ್ಥಿ ಡಿ.ಕೆ‌.ಸುರೇಶ್

ಅಭಿವೃದ್ಧಿ ಬಗ್ಗೆ ಬಿಜೆಪಿಗರಿಂದ ಕಲಿಯುವುದೇನಿಲ್ಲ, ನನ್ನ ಕಾರ್ಯವೈಖರಿ ಜನಕ್ಕೆ ಗೊತ್ತಿದೆ. ಅದರ ಫಲಿತಾಂಶ ಚುನಾವಣೆ ಮುಖಾಂತರ ಮೇ 23 ಕ್ಕೆ ನೀಡುತ್ತಾರೆ. ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ಹೊರಗಡೆಯಿಂದ ಬಂದವರು. ಅವರಿಗೆ ಈ ಕ್ಷೇತ್ರ ಮತ್ತು ಅಭಿವೃದ್ದಿ ಬಗ್ಗೆ ಏನು ಗೊತ್ತಿದೆ ಎಂದು ಸುರೇಶ್​ ಪ್ರಶ್ನಿಸಿದರು.

ಒಟ್ಟಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಇಂದು ಮೈತ್ರಿ ಅಭ್ಯರ್ಥಿ ಡಿ.ಕೆ ಸುರೇಶ್​ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಾಥ್ ನೀಡಿದರು.

ABOUT THE AUTHOR

...view details