ರಾಮನಗರ :ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಬಲೆಯಲ್ಲಿ ಸಿಲುಕಿದ್ದು ತಿಹಾರ್ ಜೈಲು ಪಾಲಾಗಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಾದ ವಿವಾದಗಳನ್ನು ಆಲಿಸಿ ಡಿಕೆಶಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ. ಅತ್ತ ಡಿಕೆಶಿ ತಾಯಿ ಗೌರಮ್ಮ ತಮ್ಮ ಮಗನಿಗೆ ಜಾಮೀನು ಸಿಗಲೆಂದು ದೇವರ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದೂ ಕೂಡ ಫಲ ಸಿಗದಂತಾಗಿದೆ.
ಡಿಕೆಶಿಗಾಗಿ ದೇವರ ಮೊರೆ ಹೋದ ತಾಯಿ ಗೌರಮ್ಮ.. ಫಲಿಸಲಿಲ್ಲ ತಾಯಿಯ ಪೂಜೆ - ಡಿಕೆಶಿ ತಿಹಾರ್ ಜೈಲು ಪಾಲು
ಡಿಕೆಶಿ ತಾಯಿ ಗೌರಮ್ಮ ತಮ್ಮ ಮಗನಿಗೆ ಜಾಮೀನು ಸಿಗಲೆಂದು ನಗರದ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಗರದ ಕೆಂಕೇರಮ್ಮ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ತಮ್ಮ ಕುಲದೈವ ಕಿಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿಕೆಶಿಗೆ ಜಾಮೀನು ಮಂಜೂರಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹರಕೆ ಕಟ್ಟಿದ್ದರು. ಡಿಕೆಶಿ ತಾಯಿಗೆ ಡಿಕೆಶಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ವೇಳೆ ಸಾಥ್ ನೀಡಿದ್ದಾರೆ.
ಡಿಕೆಶಿ ತೂಂದರೆಗೆ ಸಿಲುಕಿದಾಗ ಮತ್ತು ತಮ್ಮ ಮನೆಯ ಮೇಲೆ ಐಟಿ ದಾಳಿ ನಡೆದಾಗಲೂ ಡಿಕೆಶಿ ಕುಟುಂಬ ತಮ್ಮ ಮನೆ ದೇವರು ಕೆಂಕೇರಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ ಹಾಗೂ ಸಂಪ್ರದಾಯವಾಗಿದೆ. ಇಂದೂ ಕೂಡ ಡಿಕೆಶಿಗೆ ಜಾಮೀನು ಸಿಗಲೆಂದು ತಾಯಿ ಗೌರಮ್ಮ ಪೂಜೆ ಸಲ್ಲಿಸಿದ್ದಾರೆ.