ರಾಮನಗರ: ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ಗೆ ಸಚಿವಗಿರಿ ಸಿಗಲಿದೆ ಎನ್ನಲಾಗಿದ್ದು, ಅದಕ್ಕೆ ಪುಷ್ಠಿ ನೀಡುವಂತೆ ಬೆಂಬಲಿಗರು ರಾತ್ರೋ-ರಾತ್ರಿ ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್ಸ್ ಕಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಸಚಿವಗಿರಿ ಸಿಗುವ ಲಕ್ಷಣ... ರಾಮನಗರ ತುಂಬಾ ಸಿಪಿವೈ ಫ್ಲೆಕ್ಸ್, ಬ್ಯಾನರ್ಸ್! - ramanagara latest news
ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗುವ ಲಕ್ಷಣಗಳು ಗೋಚರವಾದ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಬ್ಯಾನರ್, ಫ್ಲೆಕ್ಸ್ ಕಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
![ಸಚಿವಗಿರಿ ಸಿಗುವ ಲಕ್ಷಣ... ರಾಮನಗರ ತುಂಬಾ ಸಿಪಿವೈ ಫ್ಲೆಕ್ಸ್, ಬ್ಯಾನರ್ಸ್! CPY Flex all over in Ramanagara!](https://etvbharatimages.akamaized.net/etvbharat/prod-images/768-512-5962635-thumbnail-3x2-flex.jpg)
ಸಚಿವಗಿರಿ ಸಿಗುವ ಲಕ್ಷಣ....ರಾಮನಗರ ತುಂಬೆಲ್ಲಾ ರಾರಾಜಿಸುತ್ತಿದೆ ಸಿಪಿವೈ ಫ್ಲೆಕ್ಸ್!
ಸಚಿವಗಿರಿ ಸಿಗುವ ಲಕ್ಷಣ....ರಾಮನಗರ ತುಂಬೆಲ್ಲಾ ರಾರಾಜಿಸುತ್ತಿದೆ ಸಿಪಿವೈ ಫ್ಲೆಕ್ಸ್!
ಅರ್ಹ ಶಾಸಕರ ಜೊತೆ ಸಿಪಿ ಯೋಗೇಶ್ವರ್ಗೂ ಕೂಡಾ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದ್ದು, ನಗರದ ತುಂಬೆಲ್ಲಾ ಸಿಪಿ ಯೋಗೇಶ್ವರ್ ಬ್ಯಾನರ್ಗಳು ರಾರಾಜಿಸುತ್ತಿವೆ.
ಸಚಿವರಾಗಿ ಪ್ರಮಾಣ ಸ್ವೀಕರಿಸುವ ಮುನ್ನವೇ ಸಿಪಿವೈ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಲು ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಸಚಿವ ಸ್ಥಾನಕ್ಕಾಗಿ ಎರಡು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದರು ಎಂದು ತಿಳಿದುಬಂದಿದೆ.
Last Updated : Feb 5, 2020, 12:12 PM IST