ಕರ್ನಾಟಕ

karnataka

ವಿರೋಧ ಮಾಡುವರು ಮಾಡಲಿ, ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಬದ್ಧ: ಸಿ.ಪಿ.ಯೋಗೇಶ್ವರ್​

By

Published : Feb 25, 2021, 7:48 PM IST

ತಂತ್ರಜ್ಞಾನ ಹಾಗೂ ಅಧುನೀಕರಣ ಬದಲಾದಂತೆ ರೇಷ್ಮೆ ಮಾರುಕಟ್ಟೆ ಕೂಡ ಬದಲಾವಣೆ ಆಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ರಾಮನಗರ-ಚನ್ನಪಟ್ಟಣ ಮಧ್ಯೆ ಹೈಟೆಕ್ ಮಾರುಕಟ್ಟೆ ನಿರ್ಮಿಸುತ್ತಿದೆ ಎಂದು ಸಚಿವ ಯೋಗೇಶ್ವರ್​ ಹೇಳಿದರು.

cp-yogeshwar
ಯೋಗೇಶ್ವರ್​

ರಾಮನಗರ: ಮಾರುಕಟ್ಟೆ ವಿಚಾರದಲ್ಲಿ ವಿರೋಧ ಮಾಡುವರು ಮಾಡಲಿ, ಮಾರುಕಟ್ಟೆ ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ತಂತ್ರಜ್ಞಾನ ಹಾಗೂ ಅಧುನೀಕರಣ ಬದಲಾದಂತೆ ರೇಷ್ಮೆ ಮಾರುಕಟ್ಟೆ ಕೂಡ ಬದಲಾವಣೆ ಆಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ರಾಮನಗರ-ಚನ್ನಪಟ್ಟಣ ಮಧ್ಯೆ ಹೈಟೆಕ್ ಮಾರುಕಟ್ಟೆ ನಿರ್ಮಿಸುತ್ತಿದೆ ಎಂದರು.

ವಿರೋಧ ಮಾಡುವರು ಮಾಡಲಿ, ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಬದ್ಧ: ಯೋಗೇಶ್ವರ್​

ಯೋಜನಾ ಪ್ರಾಧಿಕಾರ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಚನ್ನಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ಯಾವೊಬ್ಬ ಮುಖಂಡರನ್ನು ಅಧ್ಯಕ್ಷರನ್ನಾಗಿ ಮಾಡುವ ಮನಸ್ಸು ಕೂಡ ಕುಮಾರಸ್ವಾಮಿ ಮಾಡಿರಲಿಲ್ಲ. ಕುಮಾರಸ್ವಾಮಿ ಅವರು ಅಲ್ಲಿ ಇಲ್ಲಿ ತಾಲೂಕಿನ ಅಭಿವೃದ್ಧಿ ಬಗ್ಗೆ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಅಂತಾ ಕುಟುಕಿದರು.

ಇದನ್ನೂ ಓದಿ:ರಾಮನಗರ : ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಪೊಲೀಸ್ ಠಾಣಾವಾರು ತಂಡ ರಚನೆ

ABOUT THE AUTHOR

...view details