ರಾಮನಗರ:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಹೊರಡಿಸಿದ ಪ್ರಣಾಳಿಕೆಯನ್ನೇ ಮುಳಬಾಗಿಲಿನಲ್ಲೂ ಪ್ರಕಟಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲ ಮನ್ನಾ, ಅಡವಿಟ್ಟ ಒಡವೆ ಸಾಲ ಸೇರಿದಂತೆ ಇತರೆ ಆಶ್ವಾಸನೆಗಳನ್ನು ನೀಡಿ 2018ರಲ್ಲಿ ಚನ್ನಪಟ್ಟಣದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಈಗ ಇದೇ ಪ್ಲೇಟ್ನ್ನು ಮುಳಬಾಗಿಲಿನಲ್ಲಿ ಹಾಕಿದ್ದಾರೆ ಎಂದು ಆರೋಪಿಸಿದರು.
ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಪಿ ಯೋಗೇಶ್ವರ್ ವಾಗ್ದಾಳಿ ಸುಳ್ಳು ಭರವಸೆಗಳನ್ನು ನೀಡಿ ಮುಖ್ಯಮಂತ್ರಿ ಏನೋ ಆದರು. ಆದರೆ ಒಡವೆ ಸಾಲ ಮನ್ನಾ ಮಾತ್ರ ಆಗಲಿಲ್ಲ. ಕುಮಾರಸ್ವಾಮಿ ಭರವಸೆಗಳನ್ನು ನಂಬಿದ ಜನ ಸಾಲ ಮನ್ನಾ ಆಗುತ್ತದೆ ಎಂಬ ವಿಶ್ವಾಸದಲ್ಲಿ ಬಡ್ಡಿ ಕಟ್ಟದೆ, ಸಾಲವನ್ನು ತೀರಿಸದೆ ಉದಾಸೀನ ಮಾಡಿದ್ದರು. ಇದರಿಂದ ಬಡ್ಡಿ ಸಾಲ ಎರಡು ಪಟ್ಟು ಬೆಳೆದು ಎಷ್ಟೋ ಕುಟುಂಬಗಳು ಬೀದಿಗೆ ಬಂದವು. ಚನ್ನಪಟ್ಟಣದಲ್ಲೂ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಮಹಿಳೆಯರು ನನ್ನ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದ್ದರು. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಕುಮಾರಸ್ವಾಮಿಗೆ ತಟ್ಟಲಿದೆ ಎಂದರು.
ಇದನ್ನೂ ಓದಿ:ಯೋಗೇಶ್ವರ್ ಚಡ್ಡಿ ಹಾಕುವ ಮುನ್ನ, ನನಗೂ ಚನ್ನಪಟ್ಟಣಕ್ಕೂ ನಂಟಿದೆ.. ಅವನಿಗೆ ಹುಚ್ಚು ಹಿಡಿದಿದೆ.. ಹೆಚ್ಡಿಕೆ ತಿರುಗೇಟು