ರಾಮನಗರ: ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಹಣ ತಂದು ಕೆಲಸ ಮಾಡುತ್ತಾರೆ ಅದಕ್ಕೆ ನನ್ನ ಸಹಮತ ಕೂಡ ಇದೆ ಎಂದು ಹೆಚ್.ಡಿ.ಕೆ ಬಗ್ಗೆ ಮೃದು ಧೋರಣೆ ತಾಳಿದ್ದು, ಡಿ.ಕೆ ಬ್ರದರ್ಸ್ ವಿರುದ್ಧ ವಿಧಾನ ಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಗಳ ಸುರಿಮಳೆ ಗೈದರು.
ಜಿಲ್ಲೆಯ ಚನ್ನಪಟ್ಟಣದ ತಾ.ಪಂ ಸಭಾಂಗಣದಲ್ಲಿ ನರೇಗಾ ಸಂಬಂಧ ಪಿಡಿಓಗಳ ಸಭೆ ನಡೆಸಿದ ಅವರು, ನರೇಗಾ ಯೋಜನೆಯ ಹಣವನ್ನು ಕನಕಪುರದವರು ಜಾಸ್ತಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಜಿಲ್ಲಾಡಳಿತ ಕೂಡ ನರೇಗಾ ಅನುದಾನವನ್ನು ಎಲ್ಲಾ ತಾಲ್ಲೂಕುಗಳಿಗೆ ಸಮರ್ಪಕವಾಗಿ ಹಂಚಬೇಕಿದೆ, ಇಲ್ಲವಾದರೆ ಇದರಿಂದ ಜಿಲ್ಲೆಯ 3 ತಾಲ್ಲೂಕುಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಜಿಲ್ಲೆಗೆ ಸಮನಾಗಿ ಹಣ ಹಂಚಿಕೆ ಮಾಡಬೇಕು ಎಂದರು.