ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಸಂಜೆ ಕಾರ್ಯಕರ್ತರ ದಿಢೀರ್ ಸಭೆ ಕರೆದಿದ್ದಾರೆ.
ಅಖಾಡಕ್ಕಿಳಿಯುವರೇ ಸಿ ಪಿ. ಯೋಗೇಶ್ವರ್ ಮಗಳು.. ತೆರೆಮರೆಯಲ್ಲಿ ದಿಢೀರ್ ಸಭೆ - ಲೋಕಸಭಾ ಕ್ಷೇತ್ರ
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಹಾಗೂ ಎಂ.ರುದ್ರೇಶ್ ಹೆಸರುಗಳು ಅಂತಿಮವಾಗಿ ದೆಹಲಿಗೆ ಕಳಿಹಿಸಲಾಗಿದೆಯಾದರೂ, ಯೋಗೇಶ್ವರ್ ತಮ್ಮ ಮಗಳನ್ನ ಅಖಾಡಕ್ಕೆ ಇಳಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕರ್ತರ ಸಭೆ ಮಹತ್ವ ಪಡೆದಿದೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್ ಹಾಗೂ ಎಂ.ರುದ್ರೇಶ್ ಹೆಸರುಗಳು ಅಂತಿಮವಾಗಿ ದೆಹಲಿಗೆ ಕಳಿಹಿಸಲಾಗಿದೆಯಾದರೂ, ಯೋಗೇಶ್ವರ್ ತಮ್ಮ ಮಗಳನ್ನ ಅಖಾಡಕ್ಕೆ ಇಳಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಇಂದು ಚನ್ನಪಟ್ಟಣದ 5 ನೇ ಕ್ರಾಸ್ನಲ್ಲಿರುವ ಮನೆಯಲ್ಲಿ ಸಭೆ ಕರೆದಿದ್ದಾರೆ.
ಪ್ರಮುಖ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸುವಂತೆ ಕರೆ ನೀಡಿದ್ದು, ಸಭೆ ಹೆಚ್ಚಿನ ಮಹತ್ವ ಪಡೆದಿದೆ.ಇನ್ನೊಂದೆಡೆ ಅಂತಿಮವಾಗಿ ಟಿಕೆಟ್ ಘೋಷಣೆ ಬಳಿಕ ಕಾರ್ಯೋನ್ಮುಖರಾಗುವ ಸಿದ್ಧತಾ ಸಭೆ ಇದಾಗಿದೆ ಎನ್ನಲಾಗುತ್ತಿದೆ.