ರಾಮನಗರ: ರಾಮನಗರ ಕೋವಿಡ್ ಸೆಂಟರ್ನಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಸಿಗ್ತಿಲ್ಲ ಎಂದು ಕೊರೊನಾ ರೋಗಿಗಳು ಸೆಂಟರ್ ಹೊರಬಂದು ಪ್ರತಿಭಟನೆ ನಡೆಸಿದ್ದಾರೆ.
ಸರಿಯಾಗಿ ಊಟ ಇಲ್ಲ, ಮೆಡಿಸಿನ್ ಇಲ್ಲ..; ರಾಮನಗರದಲ್ಲಿ ಕೊರೊನಾ ಸೋಂಕಿತರ ಪ್ರತಿಭಟನೆ - ರಾಮನಗರದಲ್ಲಿ ಕೊರೊನಾ ಸೋಂಕಿತರ ಪ್ರತಿಭಟನೆ
ಸರಿಯಾದ ಊಟ ಸಿಕ್ತಿಲ್ಲ, ಮೆಡಿಸಿನ್ ಇಲ್ಲ, ವೈದ್ಯರು ಬಂದು ತಪಾಸಣೆ ನಡೆಸ್ತಿಲ್ಲ ಹಾಗೂ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ ಎಂದು ಕೊರೊನಾ ಸೋಂಕಿತರು ಪ್ರತಿಭಟಿಸಿದ್ದಾರೆ.

Ramnagar
ಸರಿಯಾದ ಊಟ ಸಿಕ್ತಿಲ್ಲ, ಮೆಡಿಸಿನ್ ಇಲ್ಲ, ವೈದ್ಯರು ಬಂದು ತಪಾಸಣೆ ನಡೆಸ್ತಿಲ್ಲ ಹಾಗೂ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಸರಿ ಇಲ್ಲದ ಕಾರಣ ಕೋವಿಡ್ ಸೋಂಕಿತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನು ಕೋವಿಡ್ ಸೆಂಟರ್ನಲ್ಲಿ 2 ದಿನ ಕಳೆದ್ರೂ ಬೆಡ್ ಸಿಗ್ತಿಲ್ಲ. ಒಂದು ಕಡೆ ಎಲ್ಲವೂ ಸರಿಯಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ, ಆದ್ರೆ ಕೋವಿಡ್ ಸೋಂಕಿತರ ಸಮಸ್ಯೆ ಹೇಳ ತೀರಲಾಗದು ಎಂದು ಸೋಕಿಂತರು ಆರೋಪಿಸಿದ್ದಾರೆ.
ರಾಮನಗರದಲ್ಲಿ ಕೊರೊನಾ ಸೋಂಕಿತರ ಪ್ರತಿಭಟನೆ
Last Updated : Apr 22, 2021, 11:01 PM IST