ಕರ್ನಾಟಕ

karnataka

ETV Bharat / state

ಜನನಿಬಿಡ ಪ್ರದೇಶದಲ್ಲಿ ಕೋವಿಡ್​ ಕೇರ್​ ಸೆಂಟರ್​: ಭಯದಲ್ಲಿ ಕಾಲ ಕಳೆಯುತ್ತಿರುವ ಸ್ಥಳೀಯರು - corona in ramanagara

ರಾಮನಗರ ಜಿಲ್ಲೆಯ ಚನ್ನಪಟ್ಟಣ ಕೊರೊನಾ ಕೇರ್​ ಸೆಂಟರ್​ನಲ್ಲಿ ಸೋಂಕಿತರು ಉಪಯೋಗಿಸಿದ ಮಾಸ್ಕ್, ಗ್ಲೌಸ್​ಗಳನ್ನ ಮನೆಗಳ ಬಳಿ ಬಿಸಾಡುತ್ತಿದ್ದಾರೆ. ಇದರಿಂದಾಗಿ ಆರೋಗ್ಯವಂತ ಜನರಿಗೂ ಸಹ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಜನನೀಬಿಡ ಪ್ರದೇಶದಲ್ಲಿ ಕೋವಿಡ್​ ಕೇರ್​ ಸೆಂಟರ್
ಜನನೀಬಿಡ ಪ್ರದೇಶದಲ್ಲಿ ಕೋವಿಡ್​ ಕೇರ್​ ಸೆಂಟರ್

By

Published : May 29, 2021, 8:35 PM IST

ರಾಮನಗರ:ಜಿಲ್ಲೆಯ ಚನ್ನಪಟ್ಟಣ ನಗರದ ಮಹದೇಶ್ವರ ದೇವಸ್ಥಾನದ ಬಳಿಯ ಬಾಲಕರ ಹಾಸ್ಟೆಲ್​ನಲ್ಲಿ ಕೊರೊನಾ ಕೇರ್​ ಸೆಂಟರ್​ನಿಂದ ಸ್ಥಳೀಯರು ಪ್ರತಿ ಕ್ಷಣವೂ ಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಕೋವಿಡ್​ ಕೇರ್​ ಸೆಂಟರ್

ಸುಮಾರು 35 ಜನ‌ ಕೊರೊನಾ ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಇದೇ ಬಡಾವಣೆಯಲ್ಲಿ 500 ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಕೋವಿಡ್ ಗೈಡ್​ಲೈನ್ ಪ್ರಕಾರವಾಗಿ ಯಾವುದೇ ಕೋವಿಡ್ ಕೇರ್ ಸೆಂಟರ್ ಜನವಸತಿ ಪ್ರದೇಶದಿಂದ 10 ಮೀಟರ್ ದೂರದಲ್ಲಿರಬೇಕು.

ಜೊತೆಗೆ ಇದರಿಂದಾಗಿ ಕೋವಿಡ್ ಸೋಂಕಿತರಲ್ಲದ ಜನರಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ನಿಯಮವಿದೆ. ಆದರೆ ಇದೆಲ್ಲವನ್ನ ಸ್ವತಃ ಸರ್ಕಾರಿ ಅಧಿಕಾರಿಗಳ ವರ್ಗ ಪಾಲಿಸುತ್ತಿಲ್ಲ. ಇದರಿಂದಾಗಿ ನೊಂದಿರುವ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌ಕೂಡಲೇ ಇಲ್ಲಿನ ಕೋವಿಡ್ ಕೇರ್ ಸೆಂಟರ್ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್​ನಿಂದ ಅನಾಥರಾದ ಮಕ್ಳಳಿಗೆ ಬಾಲ ಸೇವಾ ಯೋಜನೆ ಘೋಷಿಸಿದ ಸಿಎಂ

ABOUT THE AUTHOR

...view details