ಕರ್ನಾಟಕ

karnataka

ETV Bharat / state

ವೈದ್ಯ ದಂಪತಿಗೆ ಕೋವಿಡ್-19 ದೃಢ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ - ರಾಮನಗರ ವೈದ್ಯ ದಂಪತಿಗೆ ಕೊರೊನಾ ಸೋಂಕು ಪತ್ತೆ

ಕನಕಪುರ ತಾಲೂಕಿನ ವೈದ್ಯ ದಂಪತಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

Corona
Corona

By

Published : Jun 18, 2020, 12:49 PM IST

ರಾಮನಗರ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕನಕಪುರ ತಾಲೂಕಿನ ವೈದ್ಯ ದಂಪತಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ.

ಕಳೆದ ಒಂದು ವಾರದಿಂದ ನೂರಾರು ರೋಗಿಗಳು ಈ ಕ್ಲಿನಿಕ್​​​​ಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಅವರೆಲ್ಲರ ಬಗ್ಗೆಯೂ ಮಾಹಿತಿ‌ ಕಲೆ‌ ಹಾಕುತ್ತಿರುವ ಅಧಿಕಾರಿಗಳು, ವೈದ್ಯ ದಂಪತಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ. ಪ್ರಥಮ‌ ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ದ್ವಿತೀಯ ಸ್ವ್ಯಾಬ್ ಟೆಸ್ಟ್ ಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಅದು ಸಹ ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.‌ನಿರಂಜನ್ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌:ನವೋದಯ ಕ್ಲಿನಿಕ್ ಕನಕಪುರ ವೈದ್ಯ ದಂಪತಿಗೆ ಕೊರೊನಾ ದೃಢಪಟ್ಟಿದೆ. ದಯವಿಟ್ಟು ಅವರ ಆಸ್ಪತ್ರೆಗೆ ಕಳೆದ ಒಂದು ವಾರದಿಂದ ಯಾರು ಹೋಗಿದ್ದರೋ ಅವರೆಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡಿಸಿ ಕೊಳ್ಳುವುದು ಸೂಕ್ತ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ABOUT THE AUTHOR

...view details