ರಾಮನಗರ:ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಹಸು ಮೆಯಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ, ಕಣ್ವ ನದಿಯನ್ನು ದಾಟುವಾಗ ಜಾರಿ ಬಿದ್ದು ದಂಪತಿಗಳಿಬ್ಬರು ಮೃತಪಟ್ಟಿದ್ದಾರೆ. ಕೂಡ್ಲೂರು ಗ್ರಾಮದ ವೆಂಕಟೇಶ್ (65) ಹಾಗೂ ಕಾಳಮ್ಮ (60) ಮೃತಪಟ್ಟಿರುವ ದುರ್ದೈವಿಗಳು.
ಎಂದಿನಂತೆ ಹಸು ಮೆಯಿಸಿಕೊಂಡು ಮಿನಕೆರೆ ದೊಡ್ಡಿ ತೋಟದ ಕಡೆಯಿಂದ ಸಂಜೆ ಕೂಡ್ಲೂರಿಗೆ ದಂಪತಿ ವಾಪಸ್ ಆಗುತ್ತಿದ್ದರು. ಕಣ್ವ ನದಿಯನ್ನು ದಾಟುತ್ತಿದ್ದ ವೇಳೆ ಹಸು ಹಗ್ಗವನ್ನು ಕಳಚಿಕೊಂಡು ಮುಂದೆ ಹೋಗಿದೆ.