ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಇನ್ಸ್​​ಪೆಕ್ಟರ್​ಗೆ ಕೊರೊನಾ: ಹೆಚ್ಚಿದ ಆತಂಕ - ramanagara corona news

ರಾಮನಗರದಲ್ಲಿ ಇನ್ಸ್​ಪೆಕ್ಟರ್​ವೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕಿತರನ್ನು ಪತ್ತೆ‌ ಹಚ್ಚಲಾಗುತ್ತಿದೆ.

hospital
hospital

By

Published : Jul 1, 2020, 3:01 PM IST

ರಾಮನಗರ:ಜಿಲ್ಲಾ ಶಸಸ್ತ್ರ ಮೀಸಲು‌ ಪಡೆಯ‌ ಓರ್ವ ಇನ್ಸ್​​ಪೆಕ್ಟರ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಇನ್ಸ್​​ಪೆಕ್ಟರ್​ಗೆ​​ ರಾಮನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೆ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 12 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಇನ್ನುಳಿದಂತೆ ಅವರ ಸಂಪರ್ಕಕ್ಕೆ‌ ಯಾರೆಲ್ಲಾ ಬಂದಿದ್ದರು ಎಂದು ಪತ್ತೆ‌ ಹಚ್ಚಲಾಗುತ್ತಿದೆ.

ಇದೇ ಜೂನ್ 28ರಂದು ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ್ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ಸಂಬಂಧ ಅಧಿಕಾರಿಗಳ‌ ಸಭೆ ನಡೆಸಿದ್ದರು. ಆ ವೇಳೆ ಡಿಸಿಎಂಗೆ ಇನ್ಸ್​​ಪೆಕ್ಟರ್​​​ ಅವರನ್ನ ಭದ್ರತೆಗೆ ನಿಯೋಜಿಸಲಾಗಿತ್ತು. ಇದೀಗ ಇನ್ಸ್​​ಪೆಕ್ಟರ್​ಗೆ ಸೋಂಕು ದೃಢಪಟ್ಟಿದ್ದು, ಸಭೆಯಲ್ಲಿ ಭಾಗಿಯಾಗಿದ್ದವರೆಲ್ಲರಲ್ಲೂ ಆತಂಕ ಮನೆ ‌ಮಾಡಿದೆ.

ಡಿಸಿಎಂ ಭಾಗಿಯಾಗಿದ್ದ ಸಭೆಯಲ್ಲಿ ಡಿಸಿ, ಎಸ್​ಪಿ ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು. ಸೋಂಕಿತ ವ್ಯಕ್ತಿಯ ಮತ್ತಷ್ಟು ಸಂಪರ್ಕಿತರನ್ನು ಜಿಲ್ಲಾಡಳಿತ ಪತ್ತೆ ಹಚ್ಚುತ್ತಿದೆ.

ABOUT THE AUTHOR

...view details