ರಾಮನಗರ : ಸೂಕ್ತ ಚಿಕಿತ್ಸೆ, ಕುಡಿಯೋ ನೀರು ಸೇರಿ ಮೂಲಸೌಕರ್ಯಗಳ ಸಮಸ್ಯೆ ಇದೆ ಎಂದು ಆರೋಪಿಸಿ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರು ಪ್ರತಿಭಟನೆ ನಡೆಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಹೊನ್ನನಾಯಕನಹಳ್ಳಿ ಕೋವಿಡ್ ಸೆಂಟರ್ನಲ್ಲಿ ಈ ಪ್ರತಿಭಟನೆ ನಡೆದಿದೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರಿಂದ ಪ್ರತಿಭಟನೆ.. ಕೋವಿಡ್ ಸೆಂಟರ್ನಲ್ಲಿ ಪ್ರಮುಖವಾಗಿ ಸ್ವಚ್ಛತೆಯೇ ಇಲ್ಲ. ಸರಿಯಾಗಿ ಊಟ ಕೊಡುತ್ತಿಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.
ಕೋವಿಡ್ ಸೆಂಟರ್ ಒಳಗಡೆಯೇ ಪ್ರತಿಭಟನೆ ಮಾಡುತ್ತಿರುವ ಸೋಂಕಿತರು ಬೆಳಗಿನ ಉಪಹಾರ ಸೇವಿಸದೆ ಸಿಬ್ಬಂದಿ, ಮೇಲ್ವಿಚಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
150ಕ್ಕೂ ಹೆಚ್ಚು ಸೋಂಕಿತರು ಈ ಕೋವಿಡ್ ಕೇರ್ ಸೆಂಟರ್ನಲ್ಲಿದ್ದು, ಸ್ಥಳಕ್ಕೆ ತಹಶೀಲ್ದಾರ್, ಜಿಲ್ಲಾಧಿಕಾರಿ ಬರಲಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಓದಿ:ಕೋವಾಕ್ಸಿನ್ನ ಶಿಶುವೈದ್ಯಕೀಯ ಪ್ರಯೋಗಗಳು ಜೂನ್ನಿಂದ ಪ್ರಾರಂಭ ಸಾಧ್ಯತೆ