ರಾಮನಗರ:ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿ ರಾಮನಗರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆಯನ್ನ ಕಾಂಗ್ರೆಸ್ ಪಕ್ಷ ತನ್ನದಾಗಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ಚುನಾವಣೆ ನಡೆದು 7 ತಿಂಗಳ ಬಳಿಕ ನಡೆದ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಚುನಾವಣೆ ನಡೆದಿದ್ದು,ಕೈ ನಾಯಕರೇ ಮೇಲುಗೈ ಸಾಧಿಸಿದ್ದಾರೆ. 30ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಪಾರ್ವತಮ್ಮ ಅಧ್ಯಕ್ಷೆಯಾಗಿ, 1 ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಜಯಲಕ್ಷ್ಮಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಕೈ ಕಾರ್ಯಕರ್ತರು ಸಂತಸ ಪಟ್ಟರು. ಅಧ್ಯಕ್ಷ ಸ್ಥಾನ ಪಡೆಯಲು ಕಾಂಗ್ರೆಸ್ ಸದಸ್ಯರಲ್ಲೇ ಎರಡು ಬಣದ ಬಿಗ್ ಫೈಟ್ ನಡೆದಿತ್ತು. ಅಧ್ಯಕ್ಷರಾಗಲು ನಾನಾ ಕಸರತ್ತು ಮಾಡಿದ್ರೂ ಕೂಡ ಅಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಸಂಸದ ಡಿ.ಕೆ.ಸುರೇಶ್ ಅಭ್ಯರ್ಥಿ ಯಶಸ್ವಿಯಾದ್ರು.
ಕಾಂಗ್ರೆಸ್- 19 ಜೆಡಿಎಸ್ - 11 , ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಹೇಗಾದ್ರು ಮಾಡಿ ನಗರಸಭೆ ಅಧ್ಯಕ್ಷ ಗಾದಿ ಹಿಡಿಯಲೇಬೇಕೆಂಬ ಜೆಡಿಎಸ್ ಕನಸಿಗೆ ಕಾಂಗ್ರೆಸ್ ನಾಯಕರು ತಣ್ಣೀರೆರಚಿದ್ದಾರೆ.